Ultimate magazine theme for WordPress.

ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ

Authorization of new office bearers

0 39

ಬೆಳಗಾವಿ 🙁news belgaum) ದಿ. 24 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಬೆಳಗಾವಿ ಗ್ರಾಮೀಣ ಇವರ ಆಶ್ರಯದಲ್ಲಿ ತಾಲೂಕಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಬಿಇಒ ಕಚೇರಿ ಸಿಬ್ಬಂದಿಗೆ ಆದಾಯ ತೆರಿಗೆಯ ನಮೂನೆಗಳನ್ನು ಉಚಿತವಾಗಿ ವಿತರಸಲಾಯಿತು. ಒಟ್ಟು 1,653 ಜನ ಶಿಕ್ಷಕರಿಗೆ ಆದಾಯ ತೆರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಯಿತು. ಅತಿಥಿಗಳಾಗಿ ಆಗಮಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಜಗದೀಶಗೌಡ ಪಾಟೀಲ ಮಾತನಾಡಿ ಚುನಾವಣೆ ಪ್ರಣಾಳಿಕೆ ಹೊರತು ಪಡಿಸಿ ಶಿಕ್ಷಕರಿಗೆ ಆದಾಯ ತೆರಿಗೆ ಫಾರ್ಮ ಕೊಡುತ್ತಿರುವುದು ಅಭಿನಂದನಾರ್ಹ ಎಂದರು.
ಇದರ ಜೊತೆಗೆ ಶಿಕ್ಷಕ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಶಿಕ್ಷಕ ಸಂಘದ ಕಾರ್ಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬಳಿ ಮಾತನಾಡಿ ಸಂಘವು ಇನ್ನಷ್ಟು ಯೋಜನೆಗಳನ್ನು ಶಿಕ್ಷಕರಿಗೆ ತಲುಪಿಸಲು ಕಾರ್ಯವನ್ನು ಹಮ್ಮಿಕೊಂಡಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ತಾಲೂಕಾ ಘಟಕದ ಕೆಂಪಣ್ಣಾ ನಿರ್ವಾಣಿ, ಉಪಾಧ್ಯಕ್ಷರಾಗಿ ಮಾರುತಿ ನಾಗಣ್ಣವರ, ಬಿ.ಎಫ್. ಇಂಚಲ, ಕಾರ್ಯದರ್ಶಿಯಾಗಿ ಮೈಲಾರ ಹೊರಕೇರಿ, ಖಜಾಂಚಿಯಾಗಿ ಎಲ್.ಎಂ. ಕಾಕಡೆ, ಸಹಕಾರ್ಯದರ್ಶಿಯಾಗಿ ಸುಭಾಷ ವಾಗುಕರ, ಎನ್.ಡಿ. ಕೀರ್ತನೆ, ಸಂಘಟನಾ ಕಾರ್ಯದರ್ಶಿಯಾಗಿ ಸಿ.ಎಂ. ಕಲಾಲ ಆಯ್ಕೆಯಾಗಿದ್ದರೆ. ನೂತನವಾಗಿ ಆಯ್ಕೆಯಾದ ತಾಲೂಕಾ ಘಟಕದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಖಜಾಂಚಿ ಆರ್.ವಿ. ಗೋಣಿ, ಸಂಘಟನಾ ಕಾರ್ಯದರ್ಶಿ ಆನಂದಗೌಡ ಕಾದ್ರೊಳ್ಳಿ ಹಾಗೂ ತಾಲೂಕಾ ಘಟಕದ ಮಾಜಿ ಅಧ್ಯಕ್ಷ ವಿ.ಎಂ. ಮುಳ್ಳೂರ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಾಯ್.ಬಿ. ಪೂಜೇರ ನಿರ್ವಹಿಸಿದರು. ನವೀನ ಪಾಟೀಲ ವಂದಿಸಿದರು.Authorization of new office bearers

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

Your email address will not be published.