ಪೊಲೀಸ್‍ರಿಂದ ಮನೆಗಳ್ಳನ ಬಂಧನ; ರೂ.4 ಲಕ್ಷ ಮೌಲ್ಯದ ಬಂಗಾರ & ಬೆಳ್ಳಿಯ ಆಭರಣಗಳು ಜಪ್ತ.

0

ಬೆಳಗಾವಿ:  ಕ್ಯಾಂಪ್ ಪೊಲೀಸ್‍ರಿಂದ ಮನೆಗಳ್ಳನ ಬಂಧನ; ರೂ.4 ಲಕ್ಷ ಮೌಲ್ಯದ ಬಂಗಾರ & ಬೆಳ್ಳಿಯ ಆಭರಣಗಳು ಜಪ್ತ. ನವೆಂಬರ-2019 ನೇ ತಿಂಗಳಲ್ಲಿ ಶ್ರೀಮತಿ ಸಂಗೀತಾ ಸಯ್ಯಾಜಿ ಪಾಟೀಲ ಸಾ: ನಕ್ಷತ್ರ ಕಾಲೋನಿ, ವಿನಾಯಕ ನಗರ, ಬೆಳಗಾವಿ ಇವರ ಮನೆಯಲ್ಲಿ ಬಾಗಿಲ ಮುರಿದು ಯಾರೋ ಕಳ್ಳರು ಅಲ್ಮೇರಾದಲ್ಲಿಯ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು & ರೋಖ ಹಣ ಒಟ್ಟು ರೂ.1,05,600/- ಕಳ್ಳತನ ಮಾಡಿದ್ದು, ಹಾಗೂ ಡಿಸೆಂಬರ 30-2019 ರಂದು ಶ್ರೀಮತಿ ಸಂಗೀತಾ ನಾಮದೇವ ಬಿರ್ಜೆ ಸಾ: ದತ್ತ ಕಾಲೋನಿ, ವಿಜಯನಗರ, ಹಿಂಡಲಗಾ ಬೆಳಗಾವಿ ಅವರ ಮನೆಯಲ್ಲೂ ಸಹ ಇದೇ ರೀತಿ ಬಾಗಿಲದ ಕೊಂಡಿಯನ್ನು ಮುರಿದು ಯಾರೋ ಕಳ್ಳರು ಅಲ್ಮೇರಾದಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ ರೋಖ ಹಣ ಒಟ್ಟು ರೂ. 1,53,000/- ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ಪ್ರತ್ಯೇಕ ದೂರುಗಳಂತೆ ಕ್ಯಾಂಪ್ ಠಾಣೆಯಲ್ಲಿ 02 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣಗಳ ಪತ್ತೆಗೆ ಬಲೆ ಬೀಸಿದ ಕ್ಯಾಂಪ್ ಠಾಣೆ ಪಿಐ ಹಾಗೂ ಅವರ ತಂಡಕ್ಕೆ ದೊರೆತ ಮಾಹಿತಿಯಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಶ್ರೀ. ಎ. ಚಂದ್ರಪ್ಪ ಎ.ಸಿ.ಪಿ ಖಡೆಬಜಾರ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಶ್ರೀ. ಡಿ ಸಂತೋಷಕುಮಾರ ಪಿಐ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ತಂಡದ ಶ್ರೀ. ಬಿ.ಆರ್. ಡೂಗ್ ಎಎಸ್‍ಐ, ಶ್ರೀ. ಬಿ ಬಿ ಗೌಡರ ಶ್ರೀ. ಎಂ ಎ ಪಾಟೀಲ, ಶ್ರೀ. ಬಿ. ಎಮ್. ನರಗುಂದ ಶ್ರೀ. ಬಿ. ಎಸ್. ರುದ್ರಾಪೂರ ಶ್ರೀ. ಎ. ಬಿ. ಘಟ್ಟದ ಶ್ರೀ. ಯು ಎಂ ಥೈಕಾರ, ಶ್ರೀ. ಎಸ್ ಎಚ್ ತಳವಾರ ಇವರೆಲ್ಲರೂ ಕೂಡಿಕೊಂಡು ಸಂಶಯುಕ್ತ ಆರೋಪಿತನಾದ ರಾಜು ಯಲ್ಲಪ್ಪ ಆಲಟ್ಟಿ (19 ವರ್ಷ) ಸಾ: ಮನೆ ನಂ: 69 ವಂಟಮುರಿ ಕಾಲೋನಿ, ಬೆಳಗಾವಿ ಇವನಿಗೆ ಬಂಧಿಸಿ ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತನು ಸದರಿ ಎರಡೂ ಮನೆಗಳಲ್ಲಿ ತಾನೇ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಕಳ್ಳತನ ಮಾಡಿದ ರೂ.4 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ತೋರಿಸಿದಂತೆ ಅವುಗಳನ್ನು ಜಪ್ತ ಪಡಿಸಿಕೊಂಡು ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
ಆರೋಪಿತನನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ತಂಡದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಈ ಕಾರ್ಯವನ್ನು ಡಾ: ಕೆ. ತ್ಯಾಗರಾಜನ್, ಐಪಿಎಸ್ ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಶ್ರೀಮತಿ ಸೀಮಾ ಲಾಟ್ಕರ್, ಐಪಿಎಸ್ ಡಿಸಿಪಿ (ಕಾ&ಸು), & ಶ್ರೀಮತಿ ಯಶೋಧಾ ವಂಟಗೋಡಿ, ಡಿಸಿಪಿ (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಶ್ಲಾಘಿಸಿದ್ದಾರೆ.