ಗುರುವಾರ ಮುಂಜಾನೆ ವಾಘವಾಡೆ ಗ್ರಾಮದ  ವ್ಯಾಪ್ತಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ ಮೂವರನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ ಘಟನೆ ಬೆಳಕಿಗೆ

0

ಬೆಳಗಾವಿ, ಜು. 16- ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಮೂವರು ಬೈಕ್ ಕಳ್ಳರನ್ನು ಬಂಧಿಸಿ ರೂ. 6.50 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮುಂಜಾನೆ ವಾಘವಾಡೆ ಗ್ರಾಮದ  ವ್ಯಾಪ್ತಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ ಮೂವರನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಗರ, ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ ಮಾರುತಿ ಗಲ್ಲಿಯ ಅಕ್ಷಯ ಚೌಗುಲೆ (22), ಬಸವನ ಕುಡಚಿಯ ಮಹೇಶ ಅನಗೋಳಕರ (19) ಹಾಗೂ ಆಕಾಶ ಅನಗೋಳಕರ (21) ಬಂಧಿತ ಆರೋಪಿಗಳಾಗಿದ್ದಾರೆ.

ರಾಜಹಂಸಗಡ ಕೋಟೆ ಬಳಿ ದ್ವಿಚಕ್ರವಾಹನ ಕಳವಾದ ಬಗ್ಗೆ ಜುಲೈ 9ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರು ನೀಡಿದ ಮಾಹಿತಿ ಮೇರೆಗೆ ನಗರದ ವಿವಿಧ ಭಾಗಗಳಿಂದ ಕಳವು ಮಾಡಿದ್ದ 17 ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೈಕ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳು ಈಗ ಜೈಲು ಸೇರಿದ್ದಾರೆ.

ಪೊಲೀಸ್ ಆಯುಕ್ತರು, ಪೊಲೀಸ್ ಉಪ ಆಯುಕ್ತರು, ಎಸಿಪಿಗಳಾದ ಶಿವಾರೆಡ್ಡಿ, ಮಹಾಂತೇಶ್ವರ ಜಿದ್ದಿಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಪಿಎಸ್‌ಐ ಸುನಿಲ್‌ಕುಮಾರ ಅವರು ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಪಿ.ಎಸ್.ಐ ಆನಂದ ಅದಗೊಂಡ, ವಾಯ್. ವಾಯ್. ತಳೇವಾಡ , ಎಮ್.ಎಸ್, ಗಾಡವಿ, ಸಿ . ಎಮ್. ಹುಣಶ್ಯಾಳ, ಎನ್. ಎಮ್ . ಚಿಪ್ಪಲಕಟ್ಟಿ, ಜಿ. ವಾಯ್. ಪೂಜಾರ, ಎಸ್. ಎಮ್. ಸಿಂದಗಿ ಅವರನ್ನು ಒಳಗೊಂಡ ತಂಡ ಬೈಕ್ ಸಮೇತ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.