ಸ್ವಾತಂತ್ರ್ಯ ದಿನಾಚರಣೆ: ಅಗಸ್ಟ್ 3 ರಂದು ಪೂರ್ವಭಾವಿ ಸಭೆ

0

ಸ್ವಾತಂತ್ರ್ಯ ದಿನಾಚರಣೆ: ಅಗಸ್ಟ್ 3 ರಂದು ಪೂರ್ವಭಾವಿ ಸಭೆ

ಬೆಳಗಾವಿ, : ಆಗಸ್ಟ್ 15 ರಂದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕಾರ್ಯಕ್ರಮದ ಸೂಚಿಯನ್ನು ತಯಾರಿಸಲು ಹಾಗೂ ಪೂರ್ವಭಾವಿ ಸಿದ್ದತೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಗಸ್ಟ್ 3 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ 2 ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
ಅಧಿಕಾರಿಗಳ ಹಾಗೂ ಅಧಿಕಾರೇತರ ಗಣ್ಯರು ಸದರಿ ಸಭೆಗೆ ಉಪಸ್ಥಿತರಿದ್ದು, ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಕೋರಿದ್ದಾರೆ.////

 

ಜು.31 ರಂದು ವಿದ್ಯತ್ ನಿಲುಗಡೆ

ಬೆಳಗಾವಿ, : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ಹೊಸ 33 ಕೆ.ವ್ಹಿ ಮಾರ್ಗಗಳನ್ನು ನಿರ್ಮಿಸುವ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜುಲೈ 31 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.
110 ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಸುಳಗಾ, ಕಲ್ಲೇಹೋಳ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ತುರಮುರಿ, ಕೋಣೆವಾಡಿ ಹಾಗೂ ಬಾಚಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////