20 ಡಿವೈಎಸ್ಪಿಗಳಿಗೆ ಎಸ್ಪಿ ಆಗಿ ಬಡ್ತಿ

0

ಬೆಂಗಳೂರು, ಜು. 31- : ರಾಜ್ಯದ 20 ಡಿವೈಎಸ್ಪಿಗಳಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಎಸ್ಪಿ ಹುದ್ದೆಗೆ 70,850–1,07,100 ವೇತನವನ್ನು ಸಹ ನಿಗದಿಪಡಿಸಲಾಗಿದೆ.

ಬಡ್ತಿ ಪಡೆದವರು: ಎಸ್.ಟಿ.ಸಿದ್ದಲಿಂಗಪ್ಪ, ರಾಜೇಂದ್ರ ಅಂಬಡಗಟ್ಟಿ, ಮೊಹಮ್ಮದ್ ಹುಸೇನ್, ಯು. ಶರಣಪ್ಪ, ಬಸಪ್ಪ ಅಂಗಡಿ, ಎಸ್‌.ಕೆ.ಉಮೇಶ್, ಬಿ.ಎಲ್.ವೇಣುಗೋಪಾಲ್, ಗುರುನಾಥ್ ಮತ್ತೂರ್, ಸಿ.ಎನ್.ಬೋಪಯ್ಯ, ಎಂ. ಮಂಜುನಾಥ್ ಶೆಟ್ಟಿ, ಆರ್.ಆರ್.ಕಲ್ಯಾಣಶೆಟ್ಟಿ, ಸಿ. ಡಬ್ಲ್ಯು. ಪೂವಯ್ಯ, ಸಿ.ಎನ್.ಜನಾರ್ದನ್, ಚಂದ್ರಶೇಖರ್ ನೀಲಗಾರ್, ವಿನಯ್ ಅನಂತ್ ಗಾಂವಕರ್, ವಿಜಯಕುಮಾರ್ ಬಿಸ್ನಳ್ಳಿ, ಟಿ. ವೆಂಕಟೇಶ್, ವಿ. ಧನಂಜಯ್ಯ, ಶಿವಬಸಪ್ಪ ಮಹಾಂತಪ್ಪ ಸಂದಿಗವಾಡ, ಎಸ್. ಬದ್ರಿನಾಥ್.

ರಾಜೇಂದ್ರ ಅಂಬಡಗಟ್ಟಿ ಅವರನ್ನು ಬೆಳಗಾವಿ ಲೋಕಾಯುಕ್ತ ಎಸ್ಪಿ ಆಗಿ, ಯು. ಶರಣಪ್ಪ ಅವರನ್ನು ಕಲಬುರ್ಗಿ ಡಿಸಿಆರ್‌ಇ ಎಸ್ಪಿಯಾಗಿ, ಎಸ್.ಕೆ.ಉಮೇಶ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್ಪಿಯಾಗಿ ಹಾಗೂ ಶಿವಬಸಪ್ಪ ಸಂದಿಗವಾಡ ಅವರನ್ನು ದಾವಣಗೆರೆ ಎಸಿಬಿ ಎಸ್ಪಿ ಆಗಿ ವರ್ಗಾಯಿಸಲಾಗಿದೆ.

ಉಳಿದವರನ್ನು ಪೊಲೀಸ್ ಮುಖ್ಯ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.