ಆಲೂಗಡ್ಡೆ ಬೆಳೆಗೆ ರೋಗ ಹರಡದಂತೆ ಕ್ರಮ: ರೈತರಿಗೆ ಸಲಹೆ

0

ಆಲೂಗಡ್ಡೆ ಬೆಳೆಗೆ ರೋಗ ಹರಡದಂತೆ ಕ್ರಮ: ರೈತರಿಗೆ ಸಲಹೆ

ಬೆಳಗಾವಿ,  :ಜುಲೈ 14 ರಂದು ಆಲೂಗಡ್ಡೆ ಬೆಳೆಯುವ ಪ್ರದೇಶಕ್ಕೆ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದ ನುರಿತ ವಿಜ್ಞಾನಿಗಳು ಹಾಗೂ ಬೆಳಗಾವಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭೇಟಿನೀಡಿ ಬೆಳೆಗೆ ಬರುವ ರೋಗದ ಲಕ್ಷಣಗಳಿಗೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ರೋಗ ಹತೋಟಿ ತರಲು ಕ್ರಮಗಳನ್ನು ಕೈಗೊಳ್ಳಲು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಎರ್ವಿನಿಯಾ ಗಡ್ಡೆಕೊಳೆರೋಗ:
ಗಡ್ಡೆಗಳನ್ನು ಕತ್ತರಿಸಿ ಬೀಜೋಪಚಾರ ಮಾಡದೆ ಬಿತ್ತನೆ ಮಾಡುವುದರಿಂದ ಮತ್ತು ಬಿತ್ತನೆ ಮಾಡಿದ ನಂತರ ಹೆಚ್ಚು ಮಳೆಯಾದಾಗ ಮಣ್ಣಿನ ತೇವಾಂಶ ಹೆಚ್ಚಾಗಿ, ನೀರು ಬಸಿದು ಹೋಗದಿರುವುದು ಕೊಳೆರೋಗ ಹೆಚ್ಚಾಗಲು ಸಹಕಾರಿಯಾಗುತ್ತವೆ. ಆದ್ದರಿಂದ ರೈತರು ಪ್ರತಿ ಬಾರಿ ಬಿತ್ತನೆ ಮಾಡುವ ಮುನ್ನ ತಪ್ಪದೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ದುಂಡಾಣು ಸೊರಗು ರೋಗ:
ತಾಮ್ರದ ಆಕ್ಸಿ ಕ್ಲೋರೈಡ್ 50 ಡÀಬ್ಲೂ.ಪಿ. 3 ಗ್ರಾಂ ಮತ್ತು ಸ್ಟ್ರೆಪ್ಟೋಸೈಕ್ಲಿನ್ 0.5 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ರೋಗ ಪೀಡಿತ ಮತ್ತು ಸುತ್ತ ಮುತ್ತಲಿನ ಗಿಡಗಳ ಬುಡಕ್ಕೆ ಹಾಕಬೇಕು. ರೋಗ ಪೀಡಿತ ಗಿಡಗಳಿಂದ ಆರೋಗ್ಯವಂತ ಗಿಡಗಳಿಗೆ ನೀರು ಹರಿದು ಹೋಗದಂತೆ ನೋಡಿಕೊಳ್ಳಬೇಕು.
ಕಪ್ಪು ಮಚ್ಚೆ ರೋಗ:
ಮ್ಯಾಂಕೋಜೆಬ್ 75 ಡಬ್ಲೂ.ಪಿ. ಅನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ರೋಗ ಪೀಡಿತ ಮತ್ತು ಸುತ್ತ ಮುತ್ತಲಿನ ಗಿಡಗಳ ಬುಡಕ್ಕೆ ಹಾಕಬೇಕು.
ರೈತರು ಪ್ರತಿ ವರ್ಷ ಒಂದೇ ಭೂಮಿಯಲ್ಲಿ ಆಲೂಗಡ್ಡೆಯನ್ನು ಬೆಳೆಯಬಾರದು. ಪ್ರತಿ ವರ್ಷ ಬೆಳೆ ಪರಿವರ್ತನೆ ಮಾಡಬೇಕು. ಆಲೂಗಡ್ಡೆ ಬೆಳೆದ ನಂತರ ಜೋಳ/ಮೆಕ್ಕೆಜೋಳ ಬೆಳೆಯುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳ ಸಂಖ್ಯೆ ಕಡಿಮೆ ಮಾಡಬಹುದು. ಬಿತ್ತನೆ ಪೂರ್ವ ಕೊಟ್ಟಿಗೆ ಗೊಬ್ಬರ ಹಾಕುವಾಗ ಪ್ರತಿ ಟನ್‍ಗೆ 1 ಕೆ.ಜಿ. ಟ್ರೈಕೊಡರ್ಮಾ ಹಾರ್ಜಿಯಾನಂ ಮತ್ತು 1 ಕೆ.ಜಿ. ಸೂಡೋಮೋನಾಸ್ ಪ್ಲೂರೋಸೆನ್ಸ್ ಅನ್ನು ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.,/////

 

ಹೆಸರು, ಸೋಯಾಬೀನ್ ಬೆಳೆಗಳಿಗೆ ರೋಗ ಹರಡದಂತೆ ಕ್ರಮ: ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್

ಬೆಳಗಾವಿ, ಜು. 31 (ಹಂಗಾಮಿನ ಬೆಳೆಗಳಾದ ಹೆಸರು ಮತ್ತು ಸೋಯಾಬೀನ್ ಬೆಳೆಗಳಿಗೆ, ನಂಜು ರೋಗದ ಬಾಧೆ ಕಂಡು ಬಂದಿರುವುದರಿಂದ ಬೆಳೆಗಳ ತುದಿಯಲ್ಲಿನ ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತರು ರೋಗ ನಿರ್ವಹಣೆಗೆ ತುರ್ತು ಕ್ರಮ ವಹಿಸುವದು ಅತೀ ಅವಶ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾ ಶಿವನಗೌಡ ಪಾಟೀಲ್ ಅವರು ತಿಳಿಸಿದ್ದಾರೆ.
ಕಾರಣ ಸೋಯಾ ಅವರೆ ಬೆಳೆಯಲ್ಲಿ ನಂಜುರೋಗ ನಿರ್ವಹಣೆಗೆ ರೋಗದ ಲಕ್ಷಣವಿರುವ ಗಿಡಗಳನ್ನು ಬೇರು ಸಮೇತ ಕಿತ್ತು ಮಣ್ಣಿನಲ್ಲಿ ಹೂಳಬೇಕು ಹಾಗೂ ಈ ರೋಗದ ಪ್ರಸರಣದ ವಾಹಕಗಳಾದ ಬಿಳಿ ನೋಣಗಳ ಹತೋಟಿಗಾಗಿ 1.5 ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ ಅಥವಾ 1.5 ಮಿ.ಲೀ. ಟ್ರೆಯಜೋಪಾಸ್ 40 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಎಳು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.
ಹೆಸರು ಬೆಳೆಯಲ್ಲಿ ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭ ಹಂತದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು ನಂತರ ಬೆಳೆಗೆ 0.25 ಗ್ರಾಂ ಥೆಯಾಮೆಥಾಕ್ಸಾಮ್ 25 ಡಬ್ಲೂ.ಜಿ. ಪುಡಿಯನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪರಿಸಿರಿ ಹಾಗೂ ಹತ್ತಿ ಬೆಳೆಯಲ್ಲಿ ಕಂಡು ಬಂದಿರುವ ರಸಹೀರುವಕೀಟಗಳಾದ ಜಿಗಿ ಹುಳು (ಜಾಸಿಡ್ಸ್) ಥ್ರಿಪ್ಸ್ (ನುಸಿ) ಮತ್ತು ಹೇನುಗಳ

ನಿರ್ವಹಣೆಗಾಗಿ 1 ಮಿ.ಲೀ. ಫೈಪ್ರೋನಿಲ್ 10 ಇ.ಸಿ. ಅಥವಾ 0.2 ಗ್ರಾಂ ಥೈಯಾಮೆಥಾಕ್ಸಾಮ್ 25 ಡಬ್ಲೂ.ಜಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಲು ಸಲಹೆ ನೀಡಿದೆ. ಈ ರೀತಿ ಕ್ರಮವಹಿಸಿ ಸಸ್ಯ ಸಂರಕ್ಷಣೆ ಮಾಡಬೇಕು.
ಈಗ ಸದ್ಯ ಸೋಯಾಬಿನ್ ಬೆಳೆ 45-60 ದಿನದ ಬೆಳೆ ಇದ್ದು ಇದಕ್ಕೆ ಯೂರಿಯಾ ಮಾತ್ರ ಬಳಸಿದರೆ ರಸಹೀರುವ ಕೀಟ ಹಾಗೂ ತುಕ್ಕು ರೋಗ ಬರುವ ಸಾಧ್ಯತೆ ಇರುತ್ತದೆ. ಕಾರಣ ರಂಜಕಯುಕ್ತ ಕಾಂಪ್ಲೆಕ್ಸ್‍ಗಳನ್ನು ಸಿಪಾರಿಸಿನ ಪ್ರಮಾಣದಲ್ಲಿ ಬಳಸಬೇಕು.
ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾ ಶಿವನಗೌಡ ಪಾಟೀಲ್ ಅವರು ಪ್ರಕಟuಯಲ್ಲಿ ತಿಳಿಸಿದ್ದಾರೆ.////

ಅ.1 ರಂದು ಬಕ್ರೀದ್: ಮದ್ಯ ಮಾರಾಟ ನಿಷೇಧ: ಡಾ.ಕೆ.ತ್ಯಾಗರಾಜನ್

ಬೆಳಗಾವಿ, ಜು. 31  ಅಗಸ್ಟ್ 1 ರಂದು ಆಚರಿಸುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಅಗಸ್ಟ್ 1 ರ ಬೆಳಿಗ್ಗೆ 6 ಗಂಟೆಯಿಂದ ಅಗಸ್ಟ್ 2 ರ ಬೆಳಿಗ್ಗೆ 10 ಗಂಟೆಯವರೆಗೆ ಮದ್ಯ ಮಾರಟ ನಿಷೇಧಿಸಲಾಗಿದೆ.
ಸದರಿ ದಿನದಂದು ಮದ್ಯಮಾರಾಟದ ಅಂಗಡಿಗಳು, ಬಾರ್/ರೆಸ್ಟೋರೆಂಟ್‍ಗಳು, ಕ್ಲಬ್‍ಗಳು ಹಾಗೂ ದಾಸ್ತಾನು ಡಿಪೋಗಳಿಂದ ಸರಬರಾಜನ್ನು ಬಂದ್ ಇಡುವಂತೆ ಆದೇಶವನ್ನು ಹೊರಡಿಸಲಾಗಿದೆ. ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಿನಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಲಾಕ್‍ಡೌನ್ ತೆರವು: ಭಾನುವಾರ ಬಸ್ ಸಂಚಾರ

ಬೆಳಗಾವಿ, ಜು. 31 ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿ ಭಾನುವಾರದಂದು ರಾಜ್ಯ ಸರ್ಕಾರದಿಂದ ಲಾಕ್‍ಡೌನ್ ಘೋಸಿಸಲಾಗಿತ್ತು. ಆದರೆ ಅಗಸ್ಟ್ 2 ರಿಂದ ಲಾಕ್‍ಡೌನ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ವಾಹನಗಳ ಕಾರ್ಯಾಚರಣೆಯು ಯಥಾಪ್ರಕಾರವಾಗಿ ಜಾರಿಯಲ್ಲಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಆರ್. ಮುಂಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////