ಯುವತಿ ಆತ್ಮಹತ್ಯೆ…. ಶವ ಹೊರಗೆ ತೆಗೆದ ಬೆಳಗಾವಿ ಗ್ರಾಮೀಣ ಪೊಲೀಸರು…

0

ಬೈಕ್‌ ಮೇಲೆ ಏಕಾಂಗಿಯಾಗಿ ಬಂದು ಯುವತಿಯೋರ್ವಳು ತಾಲೂಕಿನ ಯಳ್ಳೂರ ಹತ್ತಿರದ ಅರವಳಿ ಒಡ್ಡಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಕಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಭಾಗ್ಯನಗರದ ಸೊನಾಲಿ ಸಂಜಯ ಸುರೇಕರ (19) ಎಂದು ಗುರುತಿಸಲಾಗಿದೆ. ಅವಳ ತಂದೆಯ ಹೆಸರಿನಲ್ಲಿರುವ KA 22 HB 2904 ದ್ವಿಚಕ್ರ ವಾಹನದ ಮೇಲೆ ಬಂದ ಯುವತಿ ಮೊಬೈಲ್ ಬೈಕ್‌ನಲ್ಲೇ ಇಟ್ಟು ನೀರಿಗೆ ಹಾರಿದ್ದಾಳೆ. ಆಗ ಅಲ್ಲಿಯೇ ಇದ್ದ ಕೇಲವರು ನೋಡಿ ಅವಳ ಮೊಬೈಲಿನಿಂದ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯುವತಿ ಬಳಿಸಿರುವ ಬೈಕ್‌ ಮತ್ತು ಮೊಬೈಲ್ ಅವಳದ್ದೆ ಎಂದು ಆಕೆಯ ಕುಟುಂಬಸ್ಥರು ಗುರುತಿಸಿದ್ದಾರೆ.

ಘಟನೆ ಕುರಿತು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪಿಐ ಸುನೀಲ ನಂದೀಶ್ವರ, ಪಿಎಸ್ಐ ಆನಂದ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವತಿ ಶವ ಹೊರ ತೆಗೆದು ತನಿಖೆ  ನಡೆಸಿದ್ದಾರೆ.