ಹೊಲಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ

0

ಬೈಲಹೊಂಗಲ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅನುದಾನದಡಿ ಮರಕಟ್ಟಿ ಗ್ರಾಮದ ರಾಯನಗೌಡ ವೀರನಗೌಡ ಪಾಟೀಲ ಇವರ ಜಮೀನಿನಿಂದ ಮತ್ತಿಕೊಳ್ಳದ ಸರವಿನವರೆಗಿನ ರೂ.2.50 ಲಕ್ಷ ವೆಚ್ಚದಲ್ಲಿ 240 ಮೀಟರ್ ರಸ್ತೆ ಸುಧಾರಣೆಗೆ ಎಪಿಎಂಸಿ ಸದಸ್ಯ ಬಸವರಾಜ ಗಡೆನ್ನವರ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು. ಈ ರಸ್ತೆಯು ನಾವಲಗಟ್ಟಿ ಮತ್ತು ಮರಕಟ್ಟಿ ಗ್ರಾಮದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಮೀನಿಗೆ ಹೋಗುವ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಬಸವರಾಜ ಗಡೆನ್ನವರ ಹೇಳಿದರು.
ಈ ಸಂದರ್ಭದಲ್ಲಿ ಯುವ ಧುರೀಣರಾದ ಈಶಪ್ರಭು ಬಾಬಾಗೌಡ ಪಾಟೀಲ, ಜಗದೀಶ ನಾವಲಗಟ್ಟಿ, ಯಲ್ಲಪ್ಪ ಕರಡಿಗುದ್ದಿ, ಸಂತೋಷ ಸಂಬಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.