ಲಿಂಗರಾಜ ಕಾಲೇಜಿನಲ್ಲಿ ಸಸಿ ನೆಡುವ ಮೂಲಕ ಡಾ.ಪ್ರಭಾಕರ ಕೋರೆಯವರ ಹುಟ್ಟುಹಬ್ಬ ಆಚರಣೆ

0

ಲಿಂಗರಾಜ ಕಾಲೇಜಿನಲ್ಲಿ ಸಸಿ ನೆಡುವ ಮೂಲಕ
ಡಾ.ಪ್ರಭಾಕರ ಕೋರೆಯವರ ಹುಟ್ಟುಹಬ್ಬ ಆಚರಣೆ
ಶಿಕ್ಷಣಶಿಲ್ಪಿ, ರೈತಮಿತ್ರ, ಸಹಕಾರಿ ಮಹರ್ಷಿ ಡಾ. ಪ್ರಭಾಕರ ಕೋರೆಯವರ 73ನೇ ಹುಟ್ಟುಹಬ್ಬ ನಿಮಿತ್ತವಾಗಿ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ಆರ್. ಎಂ. ಪಾಟೀಲ ಅವರು ಡಾ.ಪ್ರಭಾಕರ ಕೋರೆಯವರು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕೆಎಲ್‍ಇ ಸಂಸ್ಥೆಯು ಇಂದು ಜಾಗತಿಕವಾಗಿ ಮನ್ನಣೆ ಗಳಿಸಿದ್ದರೆ ಅದರ ಹಿಂದಿನ ಮಹಾನ್ ಶಕ್ತಿ ಡಾ.ಕೋರೆಯವರು. ಇಂದಿನ ಯುವ ಪೀಳಿಗೆಗೆ ಅವರು ರೋಲ್‍ಮಾಡೆಲ್ ಎಂದು ಹೇಳಿದರು.
ನಾನಾ ವಿಧದ ಸಸಿಗಳನ್ನು ಕಾಲೇಜಿನ ಆವರಣದಲ್ಲಿ ಎನ್.ಸಿ.ಸಿ. ಅಧಿಕಾರಿ ಡಾ.ಮಹೇಶ ಗುರನಗೌಡರ, ಕ್ರೀಡಾ ವಿಭಾಗ ಡಾ.ಸಿ. ರಾಮರಾವ್ ಹಾಗೂ ಎನ್.ಎಸ್.ಎಸ್. ವಿಭಾಗದ ಡಾ.ಚನ್ನಪ್ಪಗೋಳ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ನೆಟ್ಟರು. ಉಪಪಾಚಾರ್ಯ ಎಂ.ಆರ್.ಬನಹಟ್ಟಿ, ಕೆಎಲ್‍ಇ ಆಜೀವ ಸದಸ್ಯ ಡಾ.ಪ್ರಕಾಶ ಕಡಕೋಳ, ಪಪೂ ಪ್ರಾಚಾರ್ಯ ಗಿರಿಜಾ ಹಿರೇಮಠ ಉಪಸ್ಥಿತರಿದ್ದರು.