853 ಜನರು ಸಾವು

0

ದಿನಕ್ಕೆ ಅರ್ಧ ಲಕ್ಷ ಮೇಲ್ಪಟ್ಟು ಸೋಂಕು ಪತ್ತೆ ; ದೇಶದಲ್ಲಿ ದಿನಕ್ಕೆ ಕೇವಲ 10 ಸಾವಿರ ಏರಿಕೆ ಆಗುತ್ತಿದ್ದ ಸೋಂಕು ಪ್ರಕರಣಗಲ್ ಸಂಖ್ಯೆ ಈಗ ಅರ್ಧ ಲಕ್ಷ ಮೀರಿ ದೇಶದಲ್ಲಿ ಪತ್ತೆ ಆಗುತ್ತಿವೆ. ಜತೆಗೆ ಸಾವಿನ ಸಂಖ್ಯೆ ಸಹ ಏರಿಕೆ ಆಗಿದೆ. ಇದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಭಯ ಹುಟ್ಟಿಸಿದೆ. ಇನ್ನೊಂದಡೆ ವೈದ್ಯ ಪರಿಣಿತರ ತಂಡ ದಿನಕ್ಕೆ ಲಕ್ಷ ಮೇಲ್ಪಟ್ಟು ಪ್ರಕರಣಗಳು ಪತ್ತೆ ಆಗಲಿವೆ ಎಂಬ ವರದಿ ಯನ್ನು ನೀಡಿವೆ. ಇದು ದೇಶದ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿದೆ ಎಂದೇ ಹೇಳಬಹುದು

ಹೊಸದಿಲ್ಲಿ, ಆ. 2- ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 54,736 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 853 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ 17,50,724 ಜನರಿಗೆ ಸೋಂಕು ತಗುಲಿದ್ದು, ಈ ವರೆಗೆ 37,364 ಜನರು ಸಾವಿಗೀಡಾಗಿದ್ದಾರೆ. ಇದುವರೆಗೆ 11,45 ,630 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,67,730 ಸಕ್ರಿಯ ಪ್ರಕರಣಗಳು ಇವೆ.

India’s COVID tally crosses 17 lakh mark with 54,736 positive cases & 853 deaths in the last 24 hours.

Total #COVID19 cases stand at 17,50,724 including 5,67,730 active cases, 11,45,630 cured/ dis charged/ migrated & 37,364 deaths: Health Ministry govt of India 

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 4,22,118 ಜನರಿಗೆ ಸೋಂಕು ತಗುಲಿದೆ. 1,50,966 ಸಕ್ರಿಯ ಪ್ರಕರಣಗ ಳೊಂದಿಗೆ ಇದುವರೆಗೆ 2,56,158 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 14,994 ಜನರು ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಈವರೆಗೂ 2,45,859 ಜನರಿಗೆ ಸೋಂಕು ದೃಢಪಟ್ಟಿದ್ದು, 1,83,956 ಜನರು ಗುಣಮುಖರಾಗಿ ದ್ದಾರೆ. 57,968 ಸಕ್ರಿಯ ಪ್ರಕರಣಗಳಿದ್ದು, 3,935 ಮಂದಿ ಕೊರೊನಾ ವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ.

#Corona Virus Updates:

Total #COVID19 Cases in India (as on August 2, 2020)

▶️32.43% Active cases (567,730)
▶️65.44% Cured/Discharged/Migrated (1,145,629)
▶️2.13% Deaths (37,364)

ಇತ್ತ ರಾಜಧಾನಿ ದೆಹಲಿಯಲ್ಲಿ 1,35,598 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದುವರೆಗೆ 3,963 ಜನರು ಮೃತಪಟ್ಟಿದ್ದಾರೆ. 10,705 ಸಕ್ರಿಯ ಪ್ರಕರಣಗಳಿವೆ. 1,20,930 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಗುಜರಾತಿನಲ್ಲಿ ಈವರೆಗೂ 61,438 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, 44,907 ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. 14,090 ಸಕ್ರಿಯ ಪ್ರಕಗಳೊಂದಿಗೆ ಒಟ್ಟಾರೆ 2,441 ಜನರು ಮೃತಪಟ್ಟಿದ್ದಾರೆ.

ಆಂದ್ರ ಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಈವರೆಗೂ 1,40,933 ಜನರಿಗೆ ಸೋಂಕು ತಗುಲಿದೆ. 75,720 ಸಕ್ರಿಯ ಪ್ರಕರಣಗಳೊಂದಿಗೆ 63,864 ಜನರು ಗುಣಮುಖರಾಗಿ ದ್ದಾರೆ. ಒಟ್ಟಾರೆ 1,349 ಜನರು ಸಾವಿ ಗೀಡಾಗಿದ್ದಾರೆ.

ಇನ್ನುಳಿದಂತೆ ಪಶ್ಚಿಮ ಬಂಗಾಳದಲ್ಲಿ 1,581, ಉತ್ತರ ಪ್ರದೇಶದ 1,630, ಮಧ್ಯ ಪ್ರದೇಶದ 867 ಮತ್ತು ರಾಜಸ್ಥಾನದಲ್ಲಿ 674 ಜನರು  ಕೊರೊನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ.