ಅರ್ಜಿ ಆಹ್ವಾನ

0
advertise with us

ಲಾಕ್‍ಡೌನ್ ಪರಿಹಾರಧನ: ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನ

ಬೆಳಗಾವಿ, : ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ವಿದ್ಯುತ್ ಮಗ್ಗ ನೇಕಾರರು ಸಹ ಸಂಕಷ್ಟದಲ್ಲಿರುವುದರಿಂದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ಘಟಕಗಳ ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಕೂಲಿ ಕಾರ್ಮಿಕರಿಗೆ ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ರೂ.2,000/- ಗಳ ಪರಿಹಾರಧನವನ್ನು ನೇರವಾಗಿ ಸದರಿ ಕಾರ್ಮಿಕರ ಆಧಾರ್ ಲಿಂಕ್ಸ್ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬಾಕಿ ಇರುವ ನೇಕಾರರು/ಮಾಲೀಕರು ದಿನಾಂಕ:20-08-2020 ರ ಒಳಗಾಗಿ ಆಯಾ ಊರುಗಳಲ್ಲಿ ಈಗಾಗಲೇ ನಿಗದಿಪಡಿಸಿದ ಸ್ಥಳಗಳಲ್ಲಿ ಸಲ್ಲಿಸಬಹುದು ಅಥವಾ ಈ ಕಚೇರಿಗೆ ನೇರವಾಗಿ ಸಂಪರ್ಕಿಸಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ದಿನಾಂಕ: 20-08-2020 ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.
ಈಗಾಗಲೇ ಅರ್ಜಿ ಸಲ್ಲಿಸಿರುವ ನೇಕಾರರು ಹಾಗೂ ಇನ್ನು ಮುಂದೆ ಅರ್ಜಿ ಸಲ್ಲಿಸುವ ನೇಕಾರರು ತಮ್ಮ ಆಧಾರ
ಸಂಖ್ಯೆ ತಮ್ಮ ಬ್ಯಾಂಕಿನ ಖಾತೆಗಳಿಗೆ ಲಿಂಕ್ ಆಗಿರುವುದನ್ನು ಹಾಗೂ ಖಾತೆ ಚಾಲ್ತಿಯಲ್ಲಿರುವುದನ್ನು ಕೂಡಲೇ ಖಾತ್ರಿಪಡಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0831-2950674 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ನೇಕಾರರ ಸಾಲಮನ್ನಾ: ಮಾಹಿತಿ ಸಲ್ಲಿಕೆಗೆ ಆ.17 ಕಡೆಯ ದಿನ

ಬೆಳಗಾವಿ,: ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿದೋದ್ದೇಶ ಸಹಕಾರಿ ಸಂಘಗಳು, ಕೈಗಾರಿಕಾ ಸಹಕಾರಿ ಬ್ಯಾಂಕುಗಳು, ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ಧ ಸಹಕಾರಿ ಸಂಘ/ ಸೌಹಾರ್ಧ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಪಡೆದು ದಿನಾಂಕ: 01-01-2019 ರಿಂದ 31-03-2019ರ ಅವಧಿಯೊಳಗೆ ಪಾವತಿಸಿದಂತಃ ನೇಕಾರರಿಗೂ ಸಹ ರೂ.1.00 ಲಕ್ಷಗಳ ವರೆಗಿನ (ಅಸಲು ಮತ್ತು ಬಡ್ಡಿ ಸೇರಿ) ಸಾಲಮನ್ನಾ ಯೋಜನೆಯನ್ನು ವಿಸ್ತರಿಸಿ ಅವರುಗಳು ಪಾವತಿ ಮಾಡಿದಂತಹ ಸಾಲದ ಮೊತ್ತವನ್ನು ಮರುಪಾವತಿಸಲು ಆದೇಶ ಹೊರಡಿಸಲಾಗಿದೆ.
ಅದರಂತೆ ಈಗಾಗಲೇ ಯೂಸರ್ ಐ.ಡಿ ಮತ್ತು ಪಾಸ್‍ವರ್ಡ ಹೊಂದಿರುವ ಸಹಕಾರ ಸಂಘ | ಬ್ಯಾಂಕುಗಳು ತಮ್ಮ ಸಾಲಗಾರರ ಮಾಹಿತಿಯನ್ನು ಸಾಲಮನ್ನಾ ವೆಬ್ ಸೈಟ್ ಜhಣ2019.uಛಿbಛಿs.iಟಿ ರಲ್ಲಿ ಭರ್ತಿ ಮಾಡಲು ದಿನಾಂಕ: 17-08-2020 ಕೊನೆಯ ದಿನವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, “ಸಾಮಥ್ರ್ಯ ಸೌಧ”
ಅನಗೋಳ ಮುಖ್ಯ ರಸ್ತೆ, ಬೆಳಗಾವಿ ಇವರ ಕಛೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಮಿಲಿಟರಿ ಪಿಂಚಣಿದಾರರ ಮಾಜಿ ಸೈನಿಕರ
ಮಕ್ಕಳ ಶಿಕ್ಷಣಕ್ಕೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ, : ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರರ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತು ಪಡಿಸಿ) 2020-21 ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಶಿಷ್ಯವೇತನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಾಜಿ ಸೈನಿಕರ ಮಕ್ಕಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ ಡಿಪ್ಲೋಮಾವರೆಗೆ ವ್ಯಾಸಾಂಗ ಮಾಡುತ್ತಿರಬೇಕು.
ಶಿಷ್ಯವೇತನಕ್ಕೆ ಭರ್ತಿ ಮಾಡಿದ ಅರ್ಜಿಗಳನ್ನು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಳಗಾವಿ ಇವರ ಕಛೇರಿಗೆ ದಿನಾಂಕ 30-09-2020 ಹಾಗೂ ಫ್ರೋಫೇಶÀನಲ್ ಡಿಗ್ರಿ ಕೋರ್ಸುಗಳಲ್ಲಿ ಓದುತ್ತಿರುವ ವಿದ್ಯಾರ್ತಿಗಳಿಗೆ ದಿನಾಂಕ 30-11-2020ರೊಳಗೆ ಅರ್ಜಿ ಸಲ್ಲಸಲು ಕೊರಲಾಗಿದೆ.
ಶಿಷ್ಯವೇತನದ ಅರ್ಜಿಗಳನ್ನು ಕಛೇರಿ ಸಮಯದಲ್ಲಿ ಕಛೇರಿಯಿಂದ ಪಡೆದುಕೊಳ್ಳಬಹುದಾಗಿದೆ ಅಥವಾ ಇಲಾಖೆಯ ಅಂತರ್ಜಾಲದ ವಿಬ್ www.karnatakasainikwelfare.com ದಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಮಯದಲ್ಲಿ ವೈಯಕ್ತಿಕವಾಗಿ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಡೆಹರಾಡೂನ್ ರಾಷ್ಟ್ರೀಯ ಇಂಡಿಯನ್ ಮಿಲಟರಿ ಕಾಲೇಜ್:
8ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ

ಬೆಳಗಾವಿ, : ಜುಲೈ 2021ನೇ ಅಧಿವೇಶನಕ್ಕಾಗಿ ಉತ್ತರಾಖಂಡÀ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಟರಿ ಕಾಲೇಜನಲ್ಲ್ಲಿ 8ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ದಿನಾಂಕ 01 ಡಿಸೆಂಬರ್(ಮಂಗಳವಾರÀÀ) ಮತ್ತು 02 ಡಿಸೆಂಬರ್(ಬುಧವಾರÀ) 2020ರಂದು ನಡೆಸಲಾಗುವುದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಮತ್ತು ದಿನಾಂಕ 01-07-2021ರಂತೆ 11 ಳಿ ವರ್ಷದಿಂದ 13 ವರ್ಷದೊಳಗಿರುವ (ಅಂದರೆ 02-07-2008 ರಿಂದ 01-01-2009ರೊಳಗೆ ಜನಿಸಿರುವ) ಬಾಲಕರು ಮಾತ್ರ ಸದರಿ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ.
ಈ ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಈ ನಿಟ್ಟಿನಲ್ಲಿ ಯುವಕರಿಗೆ ಸರ್ವ ರೀತಿಯ ವಿದ್ಯಾಭ್ಯಾಸ/ತರಬೇತಿ ನೀಡುವುದು. ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ರೂ 42.400/- ಆಗಿರುತ್ತದೆ.
ವಿವರಣ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರ ಮೇರೆಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಭವನ, ನಂ 58 ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು-560025, ರವರಿಂದ “ಖಿಊಇ ಅಔಒಒಂಓಆಂಓಖಿ ಖIಒಅ ಆಇಊಖಂಆUಓ” Pಂಙಂಃಐಇ ಂಖಿ SಃI, ಖಿಇಐ ಃಊಂಗಿಂಓ, ಆಇಊಖಂಆUಓ (ಃಂಓಏ ಅಔಆಇ ಓಔTHE COMMANDANT RIMC DEHRADUN” PAYABLE AT SBI, TEL BHAVAN, DEHRADUN (BANK CODE NO 01576)  ಇವರ ಹೆಸರಿನಲ್ಲಿ ರೂ 600/- (ಸಾಮಾನ್ಯ ಅಭ್ಯರ್ಥಿಗಳಿಗೆ) & ರೂ 555/- (ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ) ಪಡೆದ ಬ್ಯಾಂಕ್ ಡಿಮಾಂಡ ಡ್ರಾಪ್ಟ್ ಕಳುಹಿಸಿ ಖುದ್ದಾಗಿ/ರಿಜಿಸ್ಟರ್ಡ್ ಪೋಸ್ಟ್ ದ್ವಾರ ಪಡೆಯಬಹುದಾಗಿದೆ.
ರಿಜಿಸ್ಟರ್ಡ್ ಪೋಸ್ಟ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸಲಿರುವ ಅಭ್ಯರ್ಥಿಗಳು ಸಂಬಂಧಿಸಿದ ಬ್ಯಾಂಕ್ ಡ್ರಾಪ್ಟ್‍ನೊಂದಿಗೆ 11”ಘಿ9” ಅಗಲ ಅಳತೆ ಸೈಜಿನ ಸ್ವವಿಳಾಸದ ಲಕೋಟೆಯ ಮೇಲೆ ರೂ 40/- ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸತಕ್ಕದ್ದು. ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಅಡಕಗಳೊಂದಿಗೆ ದಿನಾಂಕ 31-03-2020ರೊಳಗಾಗಿ ನಿರ್ದೆಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಭವನ, ನಂ 58 ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು-560025, ಇವರಿಗೆ, ಕಂಡಿಕೆ (2)ರಲ್ಲಿ ತಿಳಿಸಿರುವ ವಿಳಾಸಕ್ಕೆ ಸಲ್ಲಿಸಬೇಕು.

web design service in Belgaum

ಅರ್ಜಿ ಸಲ್ಲಿಸಲು ದಾಖಲಾತಿಗಳ ವಿವರ
ಮುನ್ಸಿಪಾಲಿಟಿ/ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ಧೃಢೀಕೃತ ಪ್ರತಿ, 5 ಪಾಸಪೋರ್ಟ್ ಸೈಜಿನ ಭಾವಚಿತ್ರಗಳು. (ಅರ್ಜಿಗಳಲ್ಲಿ ಅಂಟಿಸಿದ ಭಾವಚಿತ್ರವನ್ನು ಸೇರಿಸಿ)
ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಧೃಢೀಕೃತ ಪ್ರತಿ (ಆಂಗ್ಲ ಭಾಷೆಯಲ್ಲಿ ಇರುವಂತೆ ಮಾತ್ರ). ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ನೊಂದಾಯಿತ ಅಂಚೆದ್ವಾರ ರವಾನಿಸಲು ರೂ 40/-ರ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ ಶಾಲಾ ಪ್ರಾಚಾರ್ಯರು/ಮುಖ್ಯೋಪಾದ್ಯಾಯರಿಂದ ಅಭ್ಯರ್ಥಿ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರ ಮೂಲ ಪ್ರತಿ (ಧೃಢೀಕರಿಸಿದ ಅಭ್ಯರ್ಥಿ ಭಾವ ಚಿತ್ರದೊಂದಿಗೆ). ಈ ರಾಜ್ಯದ ವಾಸಸ್ಥಾನÀ ಧೃಡೀಕರಣ ಪತ (ತಹಸೀಲ್ದಾರರಿಂದ)
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಅಥವಾ ಸಮೀಪದಲ್ಲಿರುವ ಜಂಟಿ/ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಇವರನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./../////

ವಿಶ್ವ ಆನೆ ದಿನಾಚರಣೆ

ಬೆಳಗಾವಿ, : ವಿಶ್ವ ಆನೆ ದಿನ ಆಚರಣೆ ಅಂಗವಾಗಿ ಇಂದು ಬೆಳಗಾವಿ ಅರಣ್ಯ ವಿಭಾಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಜನರಲ್ಲಿ ಆನೆಗಳ ಸಂರಕ್ಷಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಆನೆ ಸಂತತಿಗಳ ಸಂರಕ್ಷಣೆ ಜೊತೆಗೆ ಅವುಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ನಿರ್ಮಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಅರಣ್ಯ ವಿಭಾಗದಿಂದ ನಿರ್ದಿಷ್ಟವಾದ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಎಲ್ಲ ಅರಣ್ಯ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
ಆನೆಗಳ ಮತ್ತು ಇತರೆ ವನ್ಯಜೀವಿಗಳ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ಷ್ಮ ಮತ್ತು ಆಯಕಟ್ಟಿನ ಅರಣ್ಯ ಪ್ರದೇಶಗಳನ್ನು ಗುರುತಿಸಿ 28 ಕಳ್ಳ ಬೇಟೆ ತಡೆ ಶಿಬಿರಗಳನ್ನು ನಿರ್ಮಿಸಿ ಅಲ್ಲಿ ಹಗಲು ಮತ್ತು ರಾತ್ರಿ ಕಾವಲುಗಾರರನ್ನು ನೇಮಿಸಿಕೊಂಡು 24×7 ಗಸ್ತು ತಿರುಗಲು ಕ್ರಮ ಕೈಗೊಳ್ಳಲಾಗಿದೆ.
ಅರಣ್ಯ ಪ್ರದೇಶಗಳಲ್ಲಿ ರೈಲು ಮಾರ್ಗಗಳು ಇರುವ ಕಡೆಗಳಲ್ಲಿ, ರೇಲ್ವೆ ಇಲಾಖೆಯೊಂದಿಗೆ ಸಭೆಗಳನ್ನು ನಡೆಸಿ ಇಂಥ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ರೈಲುಗಳ ವೇಗ ಮಿತಿಯನ್ನು ಕಡ್ಡಾಯವಾಗಿ ಕಡಿಮೆಗೊಳಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಈ ಪ್ರದೇಶಗಳಲ್ಲಿ ಡಬಲ್ ಲೈನ್ ನಿರ್ಮಾಣ ಕಾರ್ಯ ಹಾಗೂ ಬೆಳಗಾವಿ ಗೋವಾ ಎನ್.ಹೆಚ್-4ಎ ರಸ್ತೆ ಅಗಲೀಕರಣ ಕೆಲಸ ಕೂಡ ನಡೆಯುತ್ತಿದ್ದು, ಆ ಪ್ರದೇಶಗಳಲ್ಲಿ ಆನೆ ಹಾಗೂ ಇತರೆ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಲು ಕಡ್ಡಾಯವಾಗಿ ಅಂಡರ ಪಾಸಗಳನ್ನು ನಿರ್ಮಾಣ ಮಾಡಲು ನಿರ್ದೇಶನ ನೀಡಲಾಗಿದೆ. ಹಾಗೂ ರೇಲ್ವೆ ಲೈನಗಳನ್ನು ಕ್ರಾಸ ಮಾಡದಂತೆ ಉಪಯೋಗಿಸಿದ ಹಳಿಗಳ ಬ್ಯಾರಿಕೇಡಗಳನ್ನು ನಿರ್ಮಾಣ ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ. ಇದೆಲ್ಲದರ ಜೊತೆಗೆ ಅರಣ್ಯ ಪಕ್ಕದಲ್ಲಿ ವಾಸಿಸುವ ಜನರಲ್ಲಿ ಆನೆಗಳ ಬಗ್ಗೆ ಮತ್ತು ಅವುಗಳ ಸಹಜ ಜೀವನ ಬಗ್ಗೆ ಅರಿವು ಮತ್ತು ತಿಳುವಳಿಕೆ ನೀಡುವ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ವನ್ಯಪ್ರಾಣಿಗಳಿಂದ ರೈತರ ಬೆಳೆ ಹಾನಿ ಆಗಿದ್ದಲ್ಲಿ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮಕೈಗೊಳ್ಳಲು ಅಧೀನ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಜುಲೈ ಅಂತ್ಯದವರೆಗೆ 368 ವನ್ಯಜೀವಿಗಳಿಂದ ಆದ ಬೆಳೆ ಹಾನಿ ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲ ಪ್ರಕರಣಗಳಿಗೆ ಸುಮಾರು 20 ಲಕ್ಷ ರೂಪಾಯಿಗಳ ಬೆಳೆ ಪರಿಹಾರವನ್ನು ವಿಭಾಗದಿಂದ ಪಾವತಿಸಲಾಗಿದೆ ಎಂದು ಬೆಳಗಾವಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಜುಲೈ ಮಾಹೆ ಪಡಿತರ ಚೀಟಿ ವಿತರಣೆ

ಬೆಳಗಾವಿ, : ಆಗಸ್ಟ-2020ರ ಮಾಹೆಗೆ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರವನ್ನು ನೀಡುತ್ತಿದ್ದು, ಜುಲೈ-2020 ರ ಮಾಹೆಯ ಪಡಿತರ ವಿತರಿಸಲು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಅವರು ಸೂಚನೆ ನಿಡಿದ್ದಾರೆ.
ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಉಚಿತವಾಗಿ 35 ಕೆ.ಜಿ ಅಕ್ಕಿ (ಓಈSಂ), ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ (PMGKAY) ನೀಡಲಾಗುತ್ತಿದೆ.

ಬಿಪಿಎಲ್ ಪಡಿತರ ಚೀಟಿ ಹೊಂದಿದವ ಪ್ರತಿ ಕುಟುಂಬಕ್ಕೆ ಉಚಿತವಾಗಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ  (NFSA + PMGKAY)ಪ್ರತಿ ಕುಟುಂಬಕ್ಕೆ 2ಕೆ.ಜಿ ಗೋಧಿ ವಿತರಿಸಲಾಗುತ್ತಿದೆ.
ಎಪಿಎಲ್ ಪಡಿತರ ಚೀಟಿ ಹೊಂದಿದವ ಪ್ರತಿ ಕುಟುಂಬಕ್ಕೆ (ಆದ್ಯತೇತರ) ರೂ 15 ರಂತೆ ಪ್ರತಿ ಕೆ.ಜಿಗೆ ಒಪ್ಪಿಗೆ ನೀಡಿದ ಹಾಗೂ ಒಪ್ಪಿಗೆ ನೀಡಲಾರದ ಪಡಿತರ ಚೀಟಿದಾರ ಏಕ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಎರಡಕಿಂತ್ತಲೂ ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು.
ವಲಸೆ ಕಾರ್ಮಿಕರಿಗೆ ಹಾಗೂ ಪಡಿತರ ಚೀಟಿ ಪಡೆಯದೆ ಇರುವ ಪ್ರತಿ ಫಲಾನುಭವಿಗೆ ಜುಲೈ ಹಾಗೂ ಅಗಸ್ಟ ಮಾಹೆಗಳಿಗೆ (ಈಗಾಗಲೇ ಮೇ ಮತ್ತು ಜೂನ್ ಮಾಹೆಯಲ್ಲಿ ವಿತರಿಸಿದ ಫಲಾನುಭವಿಗಳನ್ನು ಹೊರತುಪಡಿಸಿ) ಪಡಿತರ ಚೀಟಿ ಹೊಂದದೆ ಇರುವ ಹಾಗೂ ವಲಸೆ ಕಾರ್ಮಿಕರಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ. ಕಡೆಲೆಕಾಳು ನೀಡಲಾಗುವುದು.
ಅಂತರ್‍ರಾಜ್ಯ/ಅಂತರ್‍ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕವೇ ಪಡಿತರ ವಿತರಣೆ ಮಾಡಲಾಗುವುದು. ಜಿಲ್ಲೆಯಾದ್ಯಂತ ಇರುವ ನ್ಯಾಯಬೆಲೆ ಅಂಗಡಿಕಾರರು ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಕಾರ್ಯವನ್ನು ಸಾಮಾಜಿಕ ಅಂತರ ಹಾಗೂ ಕೋವಿಡ್-19 ನಿಮಿತ್ಯ ವಹಿಸಬೇಕಾಗಿರುವ ಎಲ್ಲ ಮಾನದಂಡಣೆಗಳನ್ವಯ ವಿತರಣೆಗೆ ಕ್ರಮವಹಿಸಬೇಕು.
ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ವಿತರಿಸುವಂತೆ ನ್ಯಾಯಬೆಲೆ ಅಂಗಡಿಕಾರರಿಗೆ ಸೂಚಿಸಲಾಗಿದೆ.
ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿಂದ ತೊಂದರೆಯಾದಲ್ಲಿ ಟೋಲ್‍ಫ್ರಿ ಸಂಖ್ಯೆ 1967 ಗೆ ಕರೆ ಮಾಡಿ ದೂರನ್ನು ದಾಖಲಿಸಬೇಕು.
ಜಿಲ್ಲೆಯ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ವಿತರಣೆ ಮಾಡತಕ್ಕದ್ದಲ್ಲ ಹಾಗೂ ಯಾವುದೇ ಕಾರಣಕ್ಕೂ ಪ್ರತಿ ಪಡಿತರ ಚೀಟಿದಾರರಿಂದ ಸಬೂಬು ಹೇಳಿ ಇಂಟರನೇಟ್ ವಗೈರೆ ಚಾರ್ಜಸ್‍ನ್ನು ವಸೂಲಿ ಮಾಡತಕ್ಕದ್ದಲ್ಲ ಒಂದು ವೇಳೆ ಈ ರೀತಿ ದೂರುಗಳನ್ನು ಬಂದಲ್ಲಿ ಆಯಾ ತಾಲೂಕಿನ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೆ ನೇರ ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಎಸ್ಸೆಸ್ಸೆಲ್ಸಿ : ವಿಶಾಲ ಮಲ್ಲೂರ ಅತ್ಯುತ್ತಮ ಸಾಧನೆ

ಬೆಳಗಾವಿ, : ಬೈಲಹೊಂಗಲದ ಕೆ.ಆರ್.ಸಿ.ಇ.ಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿಶಾಲ ಮಲ್ಲೂರÀ ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.08 (613) ಅಂಕಗಳನ್ನು ಗಳಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದ ನಿವೃತ್ತ ಶಿಕ್ಷಕರಾದ ಸಿ.ವಿ.ಮಲ್ಲೂರ ಅವರ ಮೊಮ್ಮಗ ವಿಶಾಲ ಮಲ್ಲೂರ ಅವರ ಉತ್ತಮ ಸಾಧನೆಗೈದಿರುವ ಇತನನ್ನು ಗ್ರಾಮಸ್ಥರು, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ./////