ಕರೋನಾ; ಬೆಳಗಾವಿ ಜಿಲ್ಲೆಯಲ್ಲಿ 314 ಕೇಸ್ ಪತ್ತೆ .. 6 ಜನರು ಸಾವು6

0
advertise with us

ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೇಸ್ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗಿವೆ. ಇದು ನಗರ, ಜಿಲ್ಲೆಯ ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತಿದೆ. ನಿನ್ನೆ ಒಂದೇ ದಿನ 575 ಕೇಸ್ ಪತ್ತೆ ಜನರಲ್ಲಿ ದಿಗಿಲು ಬಡಿಸಿದೆ. ಇಂದು 314 ಕೇಸ್ ಪತ್ತೆ ಆಗಿವೆ. ಇಂದು 148 ಜನರು ಡಿಸ್ಚಾರ್ಜ್ ಆಗಿದ್ದಾರೆ. 3484 ಜನರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು, ಆ. 12 – ರಾಜ್ಯದಲ್ಲಿ ಇಂದು 7,883 ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,96,494ಕ್ಕೆ ಏರಿಕೆಯಾಗಿದೆ. 113 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 3,510ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು, ಇಂದು 7,034 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ 1,96,494 ಕೊರೋನಾ ಪ್ರಕರಣಗಳ ಪೈಕಿ 1,12,633 ಜನರು ಡಿಸ್ಚಾರ್ಜ್ ಆಗಿದ್ದು 80,343 ಜನರು ರಾಜ್ಯದ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

web design service in Belgaum

ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನಲ್ಲಿ 157 , ಹುಕ್ಕೇರಿ – 44 , ಗೋಕಾಕ್ – 32 , ಸವದತ್ತಿ – 27 , ಅಥಣಿ, ಚಿಕ್ಕೋಡಿಯಲ್ಲಿ ತಲಾ 12 ,ಖಾನಾಪುರ -8 , ರಾಯಬಾಗ ಮತ್ತು ರಾಮದುರ್ಗದಲ್ಲಿ ತಲಾ 2 ಕೇಸ್ ಪತ್ತೆ ಆಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಳಗಾವಿ ತಾಲೂ ಕಿನಲ್ಲಿ 3 , ಸವದತ್ತಿ, ಗೋಕಾಕ್ , ಬೈಲಹೊಂಗಲ್ ತಾಲೂಕಿನಲ್ಲಿ ತಲಾ ಒಬ್ಬರು ಕರೋನಾ ವೈರಸ್ ಗೆ ಬಲಿ ಆಗಿದ್ದಾರೆ.

ಜಿಲ್ಲಾವಾರು ಮಾಹಿತಿ

ಬೆಂಗಳೂರು ನಗರ – 2,082
ಬಳ್ಳಾರಿ- 635
ಮೈಸೂರು – 544
ಬೆಳಗಾವಿ- 314
ಧಾರವಾಡ- 269
ಉಡುಪಿ- 263
ಹಾಸನ- 258
ದಾವಣಗೆರೆ- 239
ದಕ್ಷಿಣ ಕನ್ನಡ- 229
ಪ್ರಕರಣಗಳು ಪತ್ತೆ ಆಗಿವೆ.

ಬೆಂಗಳೂರಿನಲ್ಲಿ ಇಂದು 2,082 ಜನರು ವೈರಸ್ ಪತ್ತೆ ಆಗಿದ್ದು, ಇಂದು ಒಂದೇ ದಿನ 23 ಜನರು ಪ್ರಾಣ ಕಳೆದುಕೊಂಡಿ ದ್ದಾರೆ. 2,360 ಜನರು ಗುಣಮುಖರಾಗಿದ್ದಾರೆ. 33,489 ಸಕ್ರಿಯ ಪ್ರಕರಣಗಳಿವೆ.