ಕರೋನಾ; ರಾಜ್ಯದಲ್ಲಿ 2 ಲಕ್ಷ ದಾಟಿದ ಸೋಂಕು

0
advertise with us

ಬೆಂಗಳೂರು, ಆ. 13 – ರಾಜ್ಯದಲ್ಲಿ ಇಂದು 6,706 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,03,200ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 103 ಜನರು ಬಲಿಯಾಗಿದ್ದಾರೆ.

ಒಟ್ಟಾರೆ ಸಾವಿನ ಸಂಖ್ಯೆ 3,613ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 1,893 ಮಂದಿ ಕೊರೋನಾಗೆ ತುತ್ತಾ ಗಿದ್ದು, ಸೋಂಕಿತರ ಸಂಖ್ಯೆ 81,733ಕ್ಕೆ ಏರಿಕೆಯಾಗಿದೆ.

ಬೆಳಗಾವಿ ವರದಿ ; ಬೆಳಗಾವಿ ಜಿಲ್ಲೆಯಲ್ಲಿ ಇಂದು 288 ಕೇಸ್ ಪತ್ತೆ ಆಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. 140 ಜನರು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 3599 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

web design service in Belgaum

ಬೆಳಗಾವಿ ತಾಲೂಕಿನಲ್ಲಿ 125 , ಚಿಕ್ಕೋಡಿ-41 , ಗೋಕಾಕ -37 , ಬೈಲಹೊಂಗಲ-26 , ಹುಕ್ಕೇರಿ -23 , ಅಥಣಿ -11, ಸವದತ್ತಿ – 8 , ಖಾನಾ ಪುರ, ರಾಮದುರ್ಗ ತಾಲೂಕಿನಲ್ಲಿ ತಲಾ 5 ಹಾಗೂ ರಾಯಬಾಗ ತಾಲೂಕಿನಲ್ಲಿ 1 ಕೇಸ್ ಪತ್ತೆ ಆಗಿವೆ.

ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು ಇಂದು 8,609 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ 2,03,200 ಕೊರೋನಾ ಪ್ರಕರಣಗಳ ಪೈಕಿ 1,21,242 ಮಂದಿ ಡಿಸ್ಚಾರ್ಜ್ ಆಗಿದ್ದು, ಇನ್ನು 78,336 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಮಾಹಿತಿ