ಇಂಡಿಯಾ ಸೈಕಲ್ ಫಾರ್ ಚೇಂಜ್ ಚಾಲೆಂಜ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಭಾಗಿಯಾಗಲು ಇದೀಗ ಬೆಳಗಾವಿ ನಗರವೂ ಸಿದ್ದವಾಗಿದ್ದು

0
advertise with us

ಭಾರತದ ಪ್ರಮುಖ ನಗರಗಳನ್ನು ಸೈಕಲ್ ಸ್ನೇಹಿಯಾಗಿಸಲು ಉತ್ತೇಜಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ಇಂಡಿಯಾ ಸೈಕಲ್ ಫಾರ್ ಚೇಂಜ್ ಚಾಲೆಂಜ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಭಾಗಿಯಾಗಲು ಇದೀಗ ಬೆಳಗಾವಿ ನಗರವೂ ಸಿದ್ದವಾಗಿದ್ದು, ಈ ಕುರಿತಾದ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ನಗರದ ನಾಗರಿಕರ ಸಲಹೆ ಸೂಚನೆ ಹಾಗೂ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಸಮೀಕ್ಷೆಗೆ ಸಿದ್ದವಾಗಿದ್ದು ಈ ಸಮೀಕ್ಷೆಯಲ್ಲಿ ಹೆಚ್ಚಿನ ನಾಗರಿಕರು ಭಾಗಿಯಾಗಲು ಬೆಳಗಾವಿ ಸ್ಮಾರ್ಟಸಿಟಿ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಗಳ ಮೂಲಕ ಬೆಳಗಾವಿ ಸೈಕಲ್ ಸ್ನೇಹಿ ಯಾಗಲು ಸಾರ್ವಜನಿಕರು ಅಗತ್ಯ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸೈಕಲ್ ಸ್ನೇಹಿ ನಗರವಾಗಿ ಅನ್ವೇಷಿಸಲು ಹೊರಟಿರುವ ಬೆಳಗಾವಿ ಸ್ಮಾರ್ಟಸಿಟಿ ನಗರದಲ್ಲಿರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮೂಲಕ ಅಥವಾ ಇಂಟರ್‍ನೆಟ್ ಬಳಸಿ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದೆ. ಈಗಾಗಲೇ ಬೆಳಗಾವಿ ನಗರದಲ್ಲಿ ಅಚ್ಚುಕಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದ್ದು ನಗರದ ಸೌಂದರ್ಯಿಕರಣ ಹೆಚ್ಚಿಸುವ ಹಾಗೂ ಜನರಲ್ಲಿ ಆರೋಗ್ಯದ ಮಹತ್ವವನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಅಭಿಯಾನ ಪೂರಕವಾಗಿದ್ದು ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ನಗರವನ್ನು ಬೆಂಬಲಿಸುವಂತೆ ಈ ಕಾರ್ಯಕ್ರಮದ ನೋಡಲ್ ಅಧಿಕಾರಿ ಮನವಿ ಮಾಡಿದ್ದಾರೆ.
ಈ ಅಭಿಯಾನದಲ್ಲಿ ಭಾಗಿಯಾಗಲು ಬೆಳಗಾವಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ‘ಇಂಡಿಯಾ ಸೈಕಲ್ಸ್ ಫಾರ್ ಚೇಂಜ್ ಚಾಲೆಂಜ್’ (Iಟಿಜiಚಿ ಅಥಿಛಿಟes ಜಿoಡಿ ಅhಚಿಟಿge ಅhಚಿಟಟeಟಿge) ಕುರಿತಂತೆ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಹಾಗೂ ಸಮುದಾಯದ ಒಳಗೊಳ್ಳುವಿಕೆ ಚಟುವಟಿಕೆಗಳನ್ನು ನಡೆಸಬೇಕಿದೆ. ಸಮೀಕ್ಷೆಯಲ್ಲಿನ ಭಾಗಿಯಾದ ಅಭಿಪ್ರಾಯಗಳ ಆಧಾರದ ಮೇಲೆ ಕೇಂದ್ರ ತಂಡ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಾಗರಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದೆ.
ಈ ಕೆಳಕಂಡ ವೆಬ್‍ಸೈಟ್ ಮೂಲಕ ನೀಡಲಾದ ಲಿಂಕ್ ಬಳಸಿ ಸಮೀಕ್ಷೆಯಲ್ಲಿ ಭಾಗಿಯಾಗಿ ನಗರವನ್ನು ಇಂಡಿಯಾ ಸೈಕಲ್ ಫಾರ್ ಚೇಂಜ್ ಚಾಲೆಂಜ್ ನಲ್ಲಿ ಆಯ್ಕೆಯಾಗುವಂತೆ ಮಾಡಲು ಕೋರಲಾಗಿದೆ.

web design service in Belgaum

https://smartnet.niua.org/indiacyclechallenge/content/support-your-city