ಕರೋನಾ; ಬೆಳಗಾವಿ ಜಿಲ್ಲೆಯಲ್ಲಿ 334 ಕೇಸ್ ಪತ್ತೆ

0
advertise with us

ಬೆಂಗಳೂರು, ಆ. 14- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಹುಲ್ಲೆಟಿನ್ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಇಂದು 7,908 ಪ್ರಕರಣ ಪತ್ತೆಯಾಗಿದ್ದು, 104 ಜನರು ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 2,11,108 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಇಂದು 104 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 3,717ಕ್ಕೆ ಏರಿಕೆ ಯಾಗಿದೆ.

ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಸಹ ಹೆಚ್ಚಾಗಿದ್ದು ಇಂದು 5,257 ಜನರು ಗುಣಮುಖರಾಗಿದ್ದಾರೆ. 2,11,108 ಕೊರೋನಾ ಪ್ರಕರಣಗಳ ಪೈಕಿ 1,21,242 ಮಂದಿ ಡಿಸ್ಚಾರ್ಜ್ ಆಗಿದ್ದು, ಇನ್ನು 80,883 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

web design service in Belgaum

ಬೆಳಗಾವಿ ಜಿಲ್ಲೆ ವರದಿ ; ಬೆಳಗಾವಿ ಜಿಲ್ಲೆಯಲ್ಲಿ ಇಂದು ೩೩೪ ಕೇಸ್ ಪತ್ತೆ ಆಗಿದ್ದು, ಇಂದು ೧೭೮ ಜನರು ಡಿಸ್ಚಾರ್ಜ್ ಆಗಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ 212, ಗೋಕಾಕ -43, ಹುಕ್ಕೇರಿ -25, ಬೈಲಹೊಂಗಲ-14, ಚಿಕ್ಕೋಡಿ – 11, ಸವದತ್ತಿ -10, ಅಥಣಿ -6, ಖಾನಾಪುರ – 5 ಕೇಸ್ ಪತ್ತೆ ಆಗಿವೆ.

ನಗರ ವರದಿ

ಬೆಳಗಾವಿ ನಗರದ ಶ್ರೀರಾಮ ನಗರ, ರಾಮತೀರ್ಥ ನಗರ, ಆಂಜನೇಯ ನಗರ, ವಿಶ್ವೇಶ್ವರಯ್ಯ ನಗರ, ಶ್ರೀನಗರ, ಶಾಹುನಗರ, ನ್ಯೂ ವೈಭವ ನಗರ, ವಿದ್ಯಾನಗರ, ಹನುಮಾನ ನಗರ, ವಡಗಾವಿ ಮಾರ್ಕೆಟ್ , ಸಂಗಮೇಶ್ವರ್ ನಗರ, ಶಿವಬಸವ ನಗರ, ಉಜ್ವಲ ನಗರ, ಅಮನ್ ನಗರ, ಶಾಂತಿ ನಗರ, ರಾಣಿ ಚನ್ನಮ್ಮ ನಗರ, ನಾಥ್ ಪೈ ಸರ್ಕಲ್, ಧಾರವಾಡ ರಸ್ತೆ, ಖಡೇ ಬಜಾರ್ ಪೊಲೀಸ್ ಸ್ಟೇಷನ್, ಉದ್ಯಮಬಾಗ ಪೊಲೀಸ್ ಸ್ಟೇಷನ್ , ಜೆಎನ್ಎಂಸಿ ಕ್ಯಾಂಪಸ್, ಹಿಂಡಲಗಾ ವಿದ್ಯಾನಗರ,ಸಮಾದೇವಿ ಗಲ್ಲಿ, ಫುಲ್ಬಾಗ ಗಲ್ಲಿ, ಸರಾಫ್ ಗಲ್ಲಿ, ಗೋಂಧಳಿ ಗಲ್ಲಿ, ವಜೈ ಗಲ್ಲಿ ವಡಗಾವಿ, ತಿಲಕವಾಡಿ ಕಾಲೋನಿ, ವಡಗಾವಿ ಮಾರ್ಕೆಟ್ನಲ್ಲಿ ಸೋಂಕು ಪತ್ತೆ ಆಗಿವೆ.

ಬೆಂಗಳೂರಿನಲ್ಲಿ ಇಂದು 2,452 ಮಂದಿ ಕೊರೋನಾಗೆ ತುತ್ತಾಗಿದ್ದು ಸೋಂಕಿತರ ಸಂಖ್ಯೆ 84,185ಕ್ಕೆ ಏರಿಕೆಯಾಗಿದೆ. ಇನ್ನು 22 ಮಂದಿ ಮೃತಪಟ್ಟಿದ್ದು ಒಟ್ಟಾರೆ ಸಾವಿನ ಸಂಖ್ಯೆ 1,360ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 35,117 ಸಕ್ರೀಯ ಪ್ರಕರಣಗಳಿವೆ.