ಬಾಂಗ್ಲಾದೇಶ ಮಸೀದಿಯಲ್ಲಿ ಏರ್ ಕಂಡಿಷನರ್ ಸ್ಫೋಟ ೨೪ ಜನರ ಸಾವು

0

ಬಾಂಗ್ಲಾದೇಶದ ಫತುಲ್ಲಾ ಪಟ್ಟಣದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಆರು ಹವಾನಿಯಂತ್ರಣಗಳು ಸ್ಫೋಟಗೊಂಡ ನಂತರ 24 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಮಗು ಸೇರಿದಂತೆ ಒಟ್ಟು 24 ಜನರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿಯ ನಿವಾಸಿ ವೈದ್ಯಕೀಯ ಅಧಿಕಾರಿ ಡಾ. ಪಾರ್ಥ ಶಂಕರ್ ಪಾಲ್ ತಿಳಿಸಿದ್ದಾರೆ.

ಪೈಪ್‌ಲೈನ್‌ಗಳಲ್ಲಿ ಅನಿಲ ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿರುವ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಾರಾಯಂಗಂಜ್ ಫತುಲ್ಲಾ ಮಾದರಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಹುಮಾಯೂನ್ ಕಬೀರ್ ಶನಿವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ. ಅದೇ ಪೊಲೀಸ್ ಠಾಣೆಯ ಅಧಿಕಾರಿ (ಒಸಿ) ಅಸ್ಲಂ ಹೊಸೈನ್ ಈ ವಿಷಯವನ್ನು ದೃಡಪಡಿಸಿದ್ದಾರೆ. ಮಸೀದಿಯ ನಿರ್ವಹಣಾ ಸಮಿತಿ, ಅದರ ನಿರ್ಮಾಣ ಪ್ರಾಧಿಕಾರ, ಸಂಬಂಧಪಟ್ಟ ವಿದ್ಯುತ್ ಮತ್ತು ಟೈಟಾಸ್ ಗ್ಯಾಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅದು ಪೂರ್ಣಗೊಳ್ಳುವ ಮೊದಲು ಯಾವುದೇ ವಿವರಗಳನ್ನು ಒದಗಿಸಲಾಗುವುದಿಲ್ಲ. ಎಂದಿದ್ದಾರೆ. ಏತನ್ಮಧ್ಯೆ, ನಾರಾಯಂಗಂಜ್ ಸಾಂಸ್ಕೃತಿಕ ಒಕ್ಕೂಟ ಮತ್ತು ಜಿಲ್ಲಾ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳು ಸ್ಫೋಟದ ವಿರುದ್ಧ ಪ್ರತಿಭಟನೆ ನಡೆಸಿವೆ. ಘಟನೆಯ ತನಿಖೆಗಾಗಿ ನಾರಾಯಂಗಂಜ್ ಜಿಲ್ಲಾಡಳಿತ, ಅಗ್ನಿಶಾಮಕ ಸೇವೆ, ಟೈಟಾಸ್ ಗ್ಯಾಸ್ ಟ್ರಾನ್ಸ್ಮಿಷನ್ ಮತ್ತು ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್, ಮತ್ತು  ವಿದ್ಯುತ್ ವಿತರಣಾ ಕಂಪನಿ (ಡಿಪಿಡಿಸಿ) ನಾಲ್ಕು ಪ್ರತ್ಯೇಕ ತನಿಖಾ ಸಮಿತಿಗಳನ್ನು ರಚಿಸಲಾಗಿದೆ.

ಸ್ಥಳೀಯರ ಪ್ರಕಾರ, ಭಕ್ತರು ಪ್ರಾರ್ಥನೆ ಮುಗಿಸಿದ ಬೆನ್ನಲ್ಲೇ ಫತುಲ್ಲಾದ ಬೈಟಸ್ ಸಲಾಮ್ ಮಸೀದಿಯಲ್ಲಿ ಶುಕ್ರವಾರ ರಾತ್ರಿ 8.45 ರ ಸುಮಾರಿಗೆ ಸ್ಫೋಟಗಳು ಸಂಭವಿಸಿವೆ.