ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಸುರೇಶ್ ಅಂಗಡಿ, ಅಂತ್ಯಕ್ರಿಯೆ

0

ಬೆಳಗಾವಿ-ಕೊರೋನಾ ಸೊಂಕು ತಗಲಿದ್ದರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಸಚಿವ ಸುರೇಶ್ ಅಂಗಡಿ ಅವರು ನಿಧನರಾದ ಬಳಿಕ,ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಸಚಿವರಾದ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಜನ ಕರ್ನಾಟಕದ ನಾಯಕರು ದೆಹಲಿಯಲ್ಲಿ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದರು,ರಾತ್ರಿ ಜಗದೀಶ್ ಶೆಟ್ಟರ್ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ದೆಹಲಿಗೆ ತೆರಳಿ ಅವರೂ ಪ್ರಯತ್ನ ಮುಂದುವರೆಸಿದರು,ಆದ್ರೆ ಕೋವೀಡ್ ನಿಯಮಾವಳಿಗಳ ಪ್ರಕಾರ ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರ ಬೆಳಗಾವಿಗೆ ತರಲು ಕೇಂದ್ರದ ಅನುಮತಿ ಸಿಗದೇ ಇರುವದರಿಂದ,ಕೊನೆಗೆ ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾಣಿಸಲಾಗಿದೆ ಎಂದು ದೆಹಲಿಯ ಮೂಲಗಳು ಖಚಿತಪಡಿಸಿವೆ.

ಇಂದು ಸಂಜೆ 4 ಗಂಟೆಗೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು ರಾಜ್ಯದ ಬಿಜೆಪಿ ನಾಯಕರು,ಮತ್ತು ಆಪ್ತರು ಇಂದು ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ದೌಡಾಯಿಸಿದ್ದಾರೆ.

ಸುರೇಶ್ ಅಂಗಡಿ ಅವರ ಧರ್ಮಪತ್ನಿ,ಮಂಗಳಾ,ಮಗಳು ಶ್ರದ್ಧಾ,ಮತ್ತು ಹಿರಿಯ ಅಳಿಯ ದೆಹಲಿಯಲ್ಲಿದ್ದಾರೆ,ಬೆಳಗಾವಿಯ ಸದಾಶಿವ ನಗರದ ಮನೆಯಲ್ಲಿ,ಹಿರಿಯ ಮಗಳು ಡಾ.ಸ್ಪೂರ್ತಿ ಇದ್ದು ಅವರ ಜೊತೆ,ಸುರೇಶ್ ಅಂಗಡಿ ಅವರ ಸಹೋದರರು ವಿಶೇಷ ವಿಮಾನದ ಮೂಲಕ ಬೆಳಗಾವಿಯಿಂದ ದೆಹಲಿಗೆ ತೆರಳಲಿದ್ದಾರೆ.

ದೆಹಲಿಯ ದ್ವಾರಕಾ ಸೆಕ್ಟರ್ ನಂಬರ್ 4 ನಲ್ಲಿ ಇರೋ ಲಿಂಗಾಯತ ರುದ್ರಭೂಮಿಯಲ್ಲಿ,ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ನಡೆಯಲಿದೆ.