ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ; ಸಿ.ಟಿ ರವಿ, ತೇಜಸ್ವಿ ಸೂರ್ಯ ಅವರಿಗೆ ಉನ್ನತ ಸ್ಥಾನ

0

ನವದೆಹಲಿ: ಬಿಹಾರ ಚುನಾವಣೆ ಸಮೀಪಿಸುತ್ತಿದ್ದು, ಅದಕ್ಕೂ ಮೊದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ರಾಷ್ಟ್ರಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ರಾಷ್ಟ್ರೀಯ ಅಧಿಕಾರಿಗಳ ಹೊಸ ಪಟ್ಟಿಯನ್ನು ಬಿಜೆಪಿ ಇದೀಗ ಬಿಡುಗಡೆ ಮಾಡಿದ್ದು, ರಾಜ್ಯದ ಮೂವರು ರಾಜಕಾರಣಿಗಳಿಗೂ ಸ್ಥಾನ ಸಿಕ್ಕಿದೆ.

ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷರಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿ.ಟಿ.ರವಿ ಮತ್ತು ರಾಷ್ಟ್ರೀಯ ವಕ್ತಾರರಾಗಿ ರಾಜ್ಯಸಭೆ ಸದಸ್ಯ ರಾಜೀವ್​ ಚಂದ್ರಶೇಖರ್​ ನೇಮಕಗೊಂಡಿದ್ದಾರೆ.

ರಾಷ್ಟ್ರೀಯ ಉಪಾಧ್ಯಕ್ಷರಾಗಿ ಶಾಸಕರಾದ ಡಾ. ರಮಣ್​ ಸಿಂಗ್​ , ವಸುಂಧರಾ ರಾಜೆ, ಸಂಸದರಾದ ರಾಧಾ ಮೋಹನ್​ ಸಿಂಗ್​, ಬೈಜಯಂತ್ ಜಯ್​ ಪಾಂಡಾ, ರಘುಬರ್​ ದಾಸ್​, ಮುಕುಲ್​ ರಾಯ್​, ರೇಖಾ ವರ್ಮಾ, ಅನ್ನಪೂರ್ಣಾ ದೇವಿ, ಡಾ. ಭಾರತಿ ಬೆನ್​ ಶಿಯಾಲ್​, ಡಿ.ಕೆ.ಅರುಣಾ, ಎಂ.ಚುಬಾ ಅಯೋ, ಅಬ್ದುಲ್ಲಾ ಕುಟ್ಟಿ ನೇಮಕಗೊಂಡಿದ್ದಾರೆ.

ಹಾಗೇ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳಾಗಿ ಸಚಿವ ಸಿ.ಟಿ.ರವಿ, ಸಂಸದರಾದ ಭೂಪೇಂದರ್​ ಯಾದವ್​, ಅರುಣ್​ ಸಿಂಗ್​, ಕೈಲಾಶ್​ ವಿಜಯ್​ವಾರಿಗ್ಯಾ, ದುಶ್ಯಂತ್ ಕುಮಾರ್ ಗೌತಮ್​, ಡಿ. ಪುರಂದರೇಶ್ವರಿ, ತರುಣ್​ ಚಗ್​, ದಿಲೀಪ್​ ಸೈಕಿಯಾ ಅವರನ್ನು ನೇಮಕ ಮಾಡಲಾಗಿದೆ.

ಹಾಗೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್​. ಸಂತೋಷ್ ಅವರು ಈ ಹಿಂದೆಯೇ ನೇಮಕಗೊಂಡಿದ್ದಾರೆ.

ಇಲ್ಲಿದೆ ನೋಡಿ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ…