ಕಾಂಗ್ರೆಸ್ಸಿಗರು ಜನರ ವಿಶ್ವಾಸ ಪಡೆಯಬೇಕಿದೆ. ಮನೆ ಮನೆಗೆ ಹೋಗಿ ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ

0
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಿ,‌ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ, ಲಾಲಬಾಹಾದ್ದೂರ ಶಾಸ್ತ್ರಿ ಅವರಂತಹ ಮಹಾಪುರುಷರ ಜಯಂತಿ ದಿನವಾದ ಇಂದು ಪವಿತ್ರದಿನ. ನನಗಂತೂ ಅತೀ ಹೆಚ್ಚು ಸಂತಸವಾದ ದಿನವಾಗಿದೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ, ಸತೀಶ  ಜಾರಕಿಹೊಳಿ ಅವರು ಜಿಲ್ಲಾ ಮಂತ್ರಿಯಾದ ವೇಳೆ ಇದನ್ನು ಮಂಜೂರು ಮಾಡಿಸಿ, ಉತ್ತರ ಕರ್ನಾಟಕಕ್ಕೆ ಕಚೇರಿ ಕಟ್ಟಡ ಉಸ್ತುವಾರಿ ಮಾಡಿದ್ದರು. ಇದು ಹೊಸದಲ್ಲ. ನನ್ನ ಕರ್ತವ್ಯ. ನನ್ನ ಕೈಲಾದ ಸಹಾಯ ಮಾಡಿಕೊಂಡು ಬೀದರ , ಉಡುಪಿ, ಕಲಬುರ್ಗಿ ಸೇರಿದಂತೆ ಮತ್ತಿತಕಡೆಗಳಲ್ಲಿ ಸಹಾಯ ಮಾಡಿದ್ದೇನೆ ಎಂದರು.
ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮಾಡಿದ ಕಾರ್ಯ ನೋಡಿದರೆ ಅವರ ಕಾರ್ಯ ಮೆಚ್ಚುಗೆ. ಕೆಪಿಸಿಸಿ ಕಚೇರಿಯನ್ನು ಯಾವ ಜಿಲ್ಲೆಯಲ್ಲಿಯೂ ಇಷ್ಟು ವ್ಯವಸ್ಥಿತವಾಗಿಲ್ಲ. ಎಸ್.ಆರ್.ಪಾಟೀಲ, ಖಂಡ್ರೆ ಅವರು ತಮ್ಮಭಾಗದಲ್ಲಿ ಕಚೇರಿ ಕಟ್ಟಿಸುವಂತಾಗಬೇಕು ಎಂದರು.
ಘಟಪ್ರಭಾದಲ್ಲಿ ನಾ.ಸು.ಹರ್ಡಿಕರ ಕಾಂಗ್ರೆಸ್ ಸೇವಾದಳ ತರಬೇತಿ ಅಕಾಡೆಮಿ ಕಟ್ಟಡದಲ್ಲಿ ಇಂದು ಗಾಂಧೀಜಿ, ಶಾಸ್ತ್ರಿ ಜಯಂತಿ ಕಾರ್ಯಕ್ರಮ ಆಚರಿಸಿದ್ದೇವೆ. ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಕಾಂಗ್ರೆಸ್ಸಿಗರು ಜನರ ವಿಶ್ವಾಸ ಪಡೆಯಬೇಕಿದೆ. ಮನೆ ಮನೆಗೆ ಹೋಗಿ ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕೊರೋನಾ ನಿಯಂತ್ರಣ ಉಪಕರಣಗಳ ಖರೀದಿಯಲ್ಲಿ ದುಡ್ಡು ಮಾಡಿ, ಇಡೀ ಸೋಂಕಿತ ಸರ್ಕಾರ ಎಂಬ ಹೆಸರು ಮಾಡಿದೆ. ನಾಲ್ಕೇ ಗಂಟೆಯಲ್ಲಿ ಲಾಕ್‌ಡೌನ್, ದೀಪ ಹಚ್ಚಲು ನಾಲ್ಕು ದಿನ, ಚಪ್ಪಾಳೆ ಹೊಡೆಲು ಮೂರು ದಿನವಂತೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.