ನಟಿ ಖುಷ್ಬೂ ಕೊನೆಗೂ  ಬಿಜೆಪಿಗೆ ಸೇರ್ಪಡೆ

0

ಹೊಸದಿಲ್ಲಿ:  ಕಾಂಗ್ರೆಸ್  ಮಾಜಿ ರಾಷ್ಟ್ರೀಯ    ವಕ್ತಾರೆ, ಬಹುಭಾಷಾ ನಟಿ ಖುಷ್ಬೂ ಕೊನೆಗೂ  ಬಿಜೆಪಿಗೆ ಸೇರ್ಪಡೆಯಾಗಿ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು    ಖುಷ್ಬೂ  ಅವರನ್ನು ಬರಮಾಡಿಕೊಂಡರು.

ಕಾಂಗ್ರೆಸ್ ಪಕ್ಷದಲ್ಲಿ  ಕೆಲಸ ಮಾಡುವವರನ್ನು ತುಳಿಯಲಾಗುತ್ತಿದೆ ಎಂದು  ಆರೋಪಿಸಿ ಖುಷ್ಬೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನಿಸಿದ್ದರು. ಬಳಿಕ  ಕಾಂಗ್ರೆಸ್ ವಕ್ತಾರ ಸ್ಥಾನಕ್ಕೆ  ರಾಜೀನಾಮೆ  ಸಲ್ಲಿಸಿದ್ದರು.