ಮಟ್ಕಾ: 11 ಜನರ ಬಂಧನ

0

ಬೆಳಗಾವಿ, ಆ. 22-  ಇಲ್ಲಿನ ಸಮರ್ಥ ನಗರದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 11 ಮಂದಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಸರ್ಫರಾಜ್ ಮಹಮ್ಮದಗೌಸ್ ಶಹಾಪಿರಿ, ದಶರಥ ಭೀಮಶಿ ಕಾಂಬಳೆ, ಪ್ರಕಾಶ ಪಾಂಡುರಂಗ ಮಲಸೂರೆ, ಬಸವರಾಜ ಜ್ಯೋತಿಬಾ ಪಾಟೀಲ, ಮಧು ಕಲ್ಲಪ್ಪ ನಾಯಕ, ಅಕ್ಷಯ ಜ್ಯೋತ್ಯ ಸಾಳುಂಕೆ, ಅರ್ಜುನ ಮಲನಾಯ್ಕ ಜಕ್ಕಪ್ಪನ್ನವರ, ಖಾಜಾಹುಸೇನ ಘೋರಿ, ಆನಂದ ಪ್ರಭು ವೆಂಕ ಟಪುರ, ವಸಂತ ರಾವಳ ನಾಯ್ಕ, ಚಂದ್ರಶೇಖರ ಭರಮಪ್ಪ ವೆಂಕಣ್ಣವರ ಬಂಧಿತರು. ಅವರಿಂದ ರೂ 27,320 ಮತ್ತು 8 ಮೊಬೈಲ್ ಫೋನ್‌ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.