ಕೈ ಮುಗಿದು ಕಣ್ಣೀರು ಹಾಕಿದ ಮುನಿರತ್ನ !

0

ಬೆಂಗಳೂರು : ಕಾಂಗ್ರೆಸ್ ನಾಯಕರ ಹೇಳಿಕೆಗೆ ನೊಂದ ಆರ್. ಆರ್. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೈ ಮುಗಿದು ಕಣ್ಣಿರು ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ನನ್ನ ಬಗ್ಗೆ ಆರೋಪಗಳನ್ನು ಮಾಡಿ, ಪ್ರಚಾರ ಮಾಡುವುದಕ್ಕೆ ನನ್ನ ವಿರೋಧವಿಲ್ಲ.

ಆದ್ರೆ ತಿರಿ ಹೋಗಿರುವ ನನ್ನ ತಾಯಿಯನ್ನು ಮಾರಾಟ ಮಾಡಿದ್ಧೀರಿ ಅಂತ ಹೇಳುತ್ತಾರೆ. ಕಳೆದ 25 ವರ್ಷದ ಹಿಂದೆ ತಿರಿಕೊಂಡ ತಾಯಿಯನ್ನು ಎಲ್ಲಿಂದ ತರಲಿ. ಚುನಾವಣೆಯಲ್ಲಿ ತಾಯಿ ಬಗ್ಗೆ ಮಾತನಾಡುವುದೇ ಏಕೆ ? ಎಂದು ಕಣ್ಣೀರು ಹಾಕಿದ್ದಾರೆ.