ರೈಟ್ಸ್ ಹಣಕಾಸಿನ ವಿವಾದ ಸಂಬಂಧ ನಟ ರಜನಿಕಾಂತ್ ಪತ್ನಿ ವಿರುದ್ದ ನ್ಯಾಯಾಂಗ ನಿಂದನೆಯ ಅರ್ಜಿ

0

ಬೆಂಗಳೂರು :  ಕೋಚಡೈಯಾನ್ ಸಿನಿಮಾ ರೈಟ್ಸ್ ಹಣಕಾಸಿನ ವಿವಾದ ಸಂಬಂಧ ನಟ ರಜನಿಕಾಂತ್ ಪತ್ನಿ ವಿರುದ್ದ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ಕೆಳ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿನಿಮಾ ನಿರ್ಮಾಪಕರಿಗೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ಸಿನಿಮಾ ನಿರ್ಮಾಪಕರು ಕೋರ್ಟ್ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಆಯಡ್ ಬ್ಯೂರೋ ಕಂಪನಿಯಿಂದ ಕೋಚ್ಚಡೈಯಾನ್ ಸಿನಿಮಾ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದ್ದು, ನವೆಂಬರ್ 2 ಕ್ಕೆ ಕೋರ್ಟ್ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮತ್ತೆ ನಟ ರಜನಿಕಾಂತ್ ಪತ್ನಿ ಲತಾರಿಗೆ ಸಂಕಷ್ಟ ಎದುರಾಗಿದೆ. 2014 ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಕೋಚಡಯ್ಯಾನ್ ಚಿತ್ರದ ಸಂಬಂಧ ಆಯಡ್ ಬ್ಯುರೋ ಕಂಪನಿ 6.2 ಕೋಟಿ ರೂ ವಂಚನೆ ಆರೋಪ ಮಾಡಿ ಎಫ್‌ಐಆರ್ ದಾಖಲಿಸಿತ್ತು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');