ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ

0

ಹುಬ್ಬಳ್ಳಿ : ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ಯಚ್ಚರಸ್ವಾಮಿಗಳ ದಿವ್ಯ ಸಂಕಲ್ಪದ ಮೇರೆಗೆ ಕೋರೊನಾ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು “ನೆಡು ಒಂದು ವೃಕ್ಷ ಬದುಕು ನೂರು ವರ್ಷ” ಎಂಬ ಪರಿಸರ ಜಾಗೃತಿ ಅಭಿಯಾನ ಶಿರೋಳದ ಜಗದ್ಗುರು ಶ್ರೀ ಯಚ್ಚರಸ್ವಾಮಿಗಳ ಜಾತ್ರಾ ಮಹೋತ್ಸವದ ನಿಮಿತ್ಯ, 1000 ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನು ಇಂದು ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಕಿತ್ತಲಿಯ ಶ್ರೀ ಮಂಜುನಾಥ ಸ್ವಾಮಿಗಳು ಗಾಂಧಿ ವೇಷಧಾರಿ ಪರಿಸರ ಪ್ರೇಮಿ ಶ್ರೀ ಮುತ್ತಣ್ಣ ತಿರ್ಲಾಪುರ, ತಾಲೂಕ ಪಂಚಾಯತಿ ಸದಸ್ಯ ಶ್ರೀ ಪ್ರಕಾಶಗೌಡ ತಿರಕನಗೌಡ್ರ, ಶ್ರೀ ವಿನಾಯಕ ಶಾಲದಾರ, ಶ್ರೀ ಬಾಲಪ್ಪ ಮೂಲಿಮನಿ, ಶ್ರೀ ರವಿ ದೊಡಮನಿ, ಯೋಗಪ್ಪ ಬಡಿಗೇರ, ಶ್ರೀ ವಿರೇಶ ಪತ್ತಾರ, ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಶ್ರೀ ಶರಣು ಚಲವಾದಿ, ಶ್ರೀ ಶಂಕರಪ್ಪ ಮುಚ್ಚಗಂಡಿ, ಶ್ರೀ ಅಬ್ದುಲಸಾಬ ಅರಗಂಜಿ ಶ್ರೀ ಪ್ರದೀಪ ಘಾಳಿ ಶ್ರೀ ಬಸವರಾಜ ಬಡಿಗೇರ ಶ್ರೀ ಬ್ರಹ್ಮಾನಂದ ಕಿತ್ತಲಿ ಶ್ರೀ ಬಾಪುಗೌಡ್ರ ತಿಮ್ಮನಗೌಡ್ರ ಹಾಗೂ ಗ್ರಾಮದ ಮುಖಂಡರು ಮತ್ತು ಖSS ಕಾರ್ಯಕರ್ತರು ಹಾಗೂ ಜೈ ಭೀಮ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.