ಸಿಎಂ ಬದಲಾವಣೆ ಕೆಲವರಿಂದ‌ ಕಾಗೆ ಹಾರಿಸುವ ಯತ್ನ: ಡಿಸಿಎಂ ಸವದಿ

0

ಬೆಳಗಾವಿ: ಮುಂದಿನ ಮೂರು ವರ್ಷದವರೆಗೂ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಉಪ‌ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.‌

ಇಲ್ಲಿನ ಯುಕೆ 27 ಹೋಟೆಲ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ  ಕೆಲವರು ಕಾಗೆ ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಅದು  ಫಲಿಸುವುದಿಲ್ಲ ಎಂದರು.

ಸಿಎಂ ಬದಲಾವಣೆ ಶಾಸಕ ಬಸನಗೌಡ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯತ್ನಾಳ್ ಅವರ ಹೇಳಿಕೆ ವೈಯಕ್ತಿಕವಾಗಿದೆ. ಪಕ್ಷದ ಹೇಳಿಕೆಯಲ್ಲ ಎಂದಷ್ಟೇ ಹೇಳಿದರು.‌

ಕೋವಿಡ್, ಪ್ರವಾಹ ಸಮಸ್ಯೆಗಳಿಂದ ಅಭಿವೃದ್ದಿಗೆ ಕಾರ್ಯಗಳಿಗೆ ಹಿನ್ನೆಡೆಯಾಗಿದೆ.  ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಒಂದು ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ  ಚರ್ಚಿಸಿ ಕಾಮಗಾರಿಗೆ ವೇಗ‌ ನೀಡಲಾಗುವುದು ಎಂದರು.‌

ಒಗ್ಗಟ್ಟಿನ ಮಂತ್ರ ಜಪಿಸಿದ ಡಿಸಿಎಂ :

ಜಿಲ್ಲೆಯ ಬಿಜೆಪಿ ನಾಯಕರ ಮಧ್ಯೆ ಕೆಲವು ವಿಷಯಗಳಿಂದಾಗಿ ಭಿನ್ನಾಭಿಪ್ರಾಯ ಮೂಡಿತ್ತು.‌ಆದ್ರೆ ಸದ್ಯ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ.  ಮುಂದಿನ  20 ವರ್ಷದವರೆಗೂ ಒಗ್ಗಟ್ಟಿನಿಂದ ಕೆಲಸ ಮಾಡತ್ತೇವೆ ಎಂದು ಹೇಳಿದರು.