ಕರ್ನಾಟಕ ರಾಜ್ಯೋತ್ಸವ: ಕನ್ನಡ ಅನುಷ್ಠಾನ ಕುರಿತು ಅ.31 ರಂದು “ಫೇಸ್ ಬುಕ್ ಲೈವ್” ಸಂವಾದ ಕಾರ್ಯಕ್ರಮ

0

ಬೆಳಗಾವಿ, : ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಅನುಷ್ಠಾನ ಕುರಿತು ಶನಿವಾರ (ಅ.31) ಸಾಹಿತಿಗಳೊಂದಿಗೆ ಫೇಸ್ ಬುಕ್ ಲೈವ್ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
“ಕನ್ನಡ ಅನುಷ್ಠಾನ- ಆಗಿದ್ದೇನು? ಆಗಬೇಕಾಗಿರುವುದು ಏನು” ವಿಷಯ ಕುರಿತು ಶನಿವಾರ ಬೆಳಿಗ್ಗೆ 10.30 ರಿಂದ 11.30 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆಶಯ ನುಡಿಗಳನ್ನು ಪ್ರಸ್ತುತಪಡಿಸಲಿದ್ದಾರೆ, ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾಗಿರುವ ಪ್ರೊ.ಬಸವರಾಜ ಜಗಜಂಪಿ, ಸಾಹಿತಿಗಳಾದ ಬಿ.ಎಸ್.ಗವಿಮಠ, ಹಿರಿಯ ನಾಟಕಕಾರರು ಮತ್ತು ಕಲಾವಿದರು ಡಿ.ಎಸ್.ಚೌಗಲೆ, ಸಾಹಿತಿ ನೀಲಗಂಗಾ ಚರಂತಿಮಠ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಮತ್ತು ಪತ್ರಕರ್ತ ಮೆಹಬೂಬ್ ಮಕಾನದಾರ ಸಮನ್ವಯ ಮಾಡಲಿದ್ದಾರೆ.
ರಾಜ್ಯೋತ್ಸವ ದಿನದಂದು ಸಂಜೆ ಐದು ಗಂಟೆಗೆ ರಂಗಮಂದಿರದಲ್ಲಿ ನಿಗದಿಪಡಿಸಲಾಗಿದ್ದ ಕಾರ್ಯಕ್ರಮದ ಬದಲಾಗಿ ಈ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ(ಅ.31) ಬೆಳಿಗ್ಗೆ 10.30 ರಿಂದ 11.30 ಗಂಟೆಯವರೆಗೆ ಜಿಲ್ಲಾಡಳಿತದ ಫೇಸ್‍ಬುಕ್ ಪುಟದಲ್ಲಿ ಸಂವಾದ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ.
ಸಂವಾದ ವೀಕ್ಷಿಸಲು https://www.facebook.com/deobelagavi ಫೇಸ್‍ಬುಕ್ ಪುಟ ಲಾಗಿನ್ ಮಾಡಬಹುದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನವ್ಹೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ

ಬೆಳಗಾವಿ, :ನವ್ಹೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಬೆಳಿಗ್ಗೆ 9 ಗಂಟೆಗೆ ನಗರದ ಸಿ.ಪಿ.ಎ.ಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣನ್ನು ನೆರೆವೇರಿಸಿ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಂದೇಶ ನೀಡಲಿದ್ದಾರೆ.
ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷಣ ಸವದಿ ಅವರು ಉಪಸ್ಥಿತಿತರಿರುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಮಾಡಲಿದ್ದಾರೆ, ವಿಶೇಷ ಆಮಂತ್ರಿತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ ಅವರು ಉಪಸ್ಥಿತರಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನೀಲ ಬೆನಕೆ ಅವರು ವಹಿಸಲಿದ್ದು, ವಿಶೇಷ ಆಮಂತ್ರಿತರಾಗಿ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಉಪ ಸಭಾಪತಿ ವಿಶ್ವನಾಥ (ಆನಂದ) ಮಾಮನಿ, ಕರ್ನಾಟಕ ಸರ್ಕಾರ ನವದೆಹಲಿ ಪ್ರತಿನಿಧಿ ಶಂಕರಗೌಡಾ ಪಾಟೀಲ್, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಹೇಶ ಕುಮಠಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅಕ್ಟೋಬರ್ 31 ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಬೆಳಗಾವಿ, : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಅಕ್ಟೋಬರ್ 31 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 9:30 ಗಂಟೆಗೆ ಕೋಟೆಕೆರೆ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗುಲಿದೆ. ///

ಭ್ರಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹ-2020

ಬೆಳಗಾವಿ, : ಜಿಲ್ಲಾ ಪಂಚಾಯತ ಬೆಳಗಾವಿಯ ಸಭಾ ಭವನದಲ್ಲಿ ಬುಧವಾರ 10 ಗಂಟೆಗೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಬೆಳಗಾವಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ವಿಷಯಗಳ ಕುರಿತು “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿ. ಎಮ್. ಜೋಶಿ, ಜಿಲ್ಲಾ ಮುಖ್ಯ ನ್ಯಾಯಾಧೀಶರು ಬೆಳಗಾವಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಎನ್. ವ್ಹಿ. ನ್ಯಾಯಾಧೀಶರು, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾದ ಗೌರವಾನ್ವಿತ ಶ್ರೀ ಸಿ. ಎಮ್. ಜೋಶಿ, ಜಿಲ್ಲಾ ಮುಖ್ಯ ನ್ಯಾಯಾಧೀಶರು ಬೆಳಗಾವಿ ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ “ ಕೋವಿಡ್-19 ಸಾಂಕ್ರಾಮಿಕ ರೋಗವು ನಮ್ಮೆಲ್ಲರಿಗೆ ಇವತ್ತಿನ ದಿನ ಹೇಗೆ ಬದುಕಬೇಕು ಎಂಬ ಬಗ್ಗೆ ಪಾಠ ಕಲಿಸಿದ್ದು, ಆದ್ದರಿಂದ ನಾವೇಲ್ಲರೂ ಜೀವನ ಏನು ಎಂಬುವ ಬಗ್ಗೆ ತಿಳಿದುಕೊಂಡು ಬದುಕಬೇಕು ಮತ್ತು ಅತೀ ಆಸೆ ಮಾಡದೇ ಇದ್ದಷ್ಟರಲ್ಲಿಯೇ ಜೀವನ ನಡೆಸುವ ಕಲೆ ಕಲೆಯಬೇಕು” ಎಂದು ಮಾತನಾಡಿದರು.
ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಇಲಾಖೆಯ ಸುಮಾರು 100 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಎಲ್ಲರೂ ಸಮಾರಂಭದಲ್ಲಿ ಭ್ರಷ್ಟಾಚಾರದ ವಿರುದ್ದ ಹೋರಾಟವನ್ನು ಬೆಂಬಲಿಸಲು ಪ್ರತಿಜ್ಞೆ ಮಾಡಿದರು.
ಈ ಸಮಾರಂಭದಲ್ಲಿ, ಪೊಲೀಸ್ ಉಪಾಧೀಕ್ಷಕರು ಮಹಾಂತೇಶ್ವರ ಜಿದ್ದಿ, ಎಸಿಬಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎ.ಎಸ್.ಗುದಿಗೊಪ್ಪ ಹಾಗೂ ಎಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗಳು, ವಿಜಯ ದೇವರಾಜ ಅರಸ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ, ಪ್ರವೀಣ ಅಗಸಗಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಎಸಿಬಿ ಬೆಳಗಾವಿ ಇವರು ಭಾಗವಹಿಸಿದ್ದರು.///