ಡಿಸಿಸಿ ಬ್ಯಾಂಕ್ ಶತಮಾನೋತ್ಸವಕ್ಕೆ ಪ್ರಧಾನಿ‌ ಮೋದಿಗೆ ಆಹ್ವಾನ: ಶಾಸಕ‌ ಉಮೇಶ ಕತ್ತಿ

0

ಬೆಳಗಾವಿ: ಹೊಸದಾಗಿ ಡಿಡಿಸಿ ಬ್ಯಾಂಕ್ ಉದ್ಘಾಟನೆ ಪ್ರಧಾನಿ ಮೋದಿ ಅವರುಗೆ ಆಹ್ವಾನ ನೀಡುತ್ತೇವೆ ಎಂದು ಶಾಸಕ‌ ಉಮೇಶ ಕತ್ತಿ ಹೇಳಿದರು‌.

ಇಲ್ಲಿನ ಯು‌.ಕೆ 27 ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ನೂರು ವರ್ಷದ ಸಂಭ್ರಮಾಚರಣೆಗೆ  ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲು  ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ  ಜಿಲ್ಲೆಯ ಎಲ್ಲ ಮಂ ಬಿಜೆಪಿ ‌ನಾಯಕರು ದೆಹಲಿ ಹೋರಟಿದ್ದೇವೆ ಎಂದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ನ್ನು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನ ‌ಮಾಡುತ್ತೇವೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಉಪ‌ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದ ಅಣ್ಣಾಸಾಬ್ ಜೊಲ್ಲೆ, ಸಚಿವೆ ಶಶಿಕಲಾ‌ ಜೊಲ್ಲೆ, ಉಪ ಸಭಾಪತಿ ಆನಂದ‌ ಮಾನವಿ, ಶಾಸಕ ಮಹಾಂತೇಶ ದೊಡ್ಡಗೌಡರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮುಂತಾದವರು ಇದ್ದರು.