ಉತ್ತರ ಕರ್ನಾಟಕದವರು ಬಹಳ ವರ್ಷಗಳಿಂದ ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಮುಂದಿನ ಸಿಎಂ ಈ ಭಾಗದವರೇ ಆಗಬೇಕು ; ಮಾಜಿ ಸಂಸದ ರಮೇಶ ಕತ್ತಿ

0

ಬೆಳಗಾವಿ : ಉತ್ತರ ಕರ್ನಾಟಕದವರು ಬಹಳ ವರ್ಷಗಳಿಂದ ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಮುಂದಿನ ಸಿಎಂ ಈ ಭಾಗದವರೇ ಆಗಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಅವರು, ಸಹೋದರ ಉಮೇಶ್ ಕತ್ತಿ ಮಂತ್ರಿನೇ ಆಗುತ್ತಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ಸಹೋದರನಿಗೆ ಸಿಪಾಯಿ ಆಗಾಕ್ ಆಗವಲ್ದು, ಡಿಸಿ ಹೆಂಗ್ ಆಗ್ತಾನಾ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಉಮೇಶ ಕತ್ತಿ ಹಿರಿಯ ರಾಜಕಾರಣಿಯಾಗಿದ್ದು, ಅನುಭವ ಇದೆ. ಮೂವರು ಸಿಎಂಗಳ ಕೈಯಲ್ಲಿ ಸುಮಾರು 13 ವರ್ಷ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಅನುಭವ ಹೊಂದಿದ್ದಾರೆ. ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಅವರಿಗಿದೆ ಎಂದು ಪ್ರತಿಕ್ರಿಯಿಸಿದರು.