ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಎಡಪಕ್ಷ 20 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.

0

ಪಟ್ನಾ: ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಎಡಪಕ್ಷ 20 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ 29 ಚುನಾವಣಾ ಕ್ಷೇತ್ರಗಳಲ್ಲಿ ಎಡಪಕ್ಷ ಸ್ಪರ್ಧಿಸಿದೆ.

ಈ ಪೈಕಿ ಸಿಪಿಐ (ಎಂ-ಎಲ್) 19 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಸಿಪಿಐ – 6 ಮತ್ತು ಸಿಪಿಎಂ- 4 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಆರ್‌ಜೆಡಿ ಮತ್ತು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಸಿಪಿಐ, ಸಿಪಿಐ(ಎಂ),ಸಿಪಿಐ (ಎಂ-ಎಲ್) ಪಕ್ಷವು ಅಜಿಯಾಂವ್ ,ಅರಾಹ್, ಅರ್ವಾಲ್, ಬಲರಾಂಪುರ್, ಬಭೂತಿಪುರ್, ದರೌಲಿ, ದರೌಂದಾ, ದಮರಾನ್, ಘೋಸಿ ,ಕರಾಕಟ್, ಮಾಂಝಿ, ಮತಿಹನಿ, ಪಲಿಗಂಜ್, ತರಾರಿ, ವಾರಿಸ್‌ನಗರ್, ಜಿರಾದೈ, ಬಚ್ವಾರಾ ಮತ್ತು ಬಾಖ್ರಿ ಸೀಟುಗಳಲ್ಲಿ ಸ್ಪರ್ಧಿಸಿದೆ.

ಬಿಹಾರದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿದ್ದ ಎಡರಂಗ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ಪರಾಭವಗೊಂಡಿತ್ತು,. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿದ್ದು 2015ರ ಚುನಾವಣೆಯಲ್ಲಿ ಸಿಪಿಐ(ಎಂ- ಎಲ್ ) 3 ಸೀಟುಗಳನ್ನು ಗಳಿಸಿತ್ತು. ಇನ್ನೆರಡು ಪಕ್ಷಗಳು ಖಾತೆ ತೆರೆದಿರಲಿಲ್ಲ.

ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡ, ಎಡ ಪಕ್ಷಗಳು ಮಹಾಘಟ್‌ಬಂಧನ್‌ನಲ್ಲಿ ಮಹತ್ತರ ಪಾತ್ರ ವಹಿಸಲಿವೆ.

ಚುನಾವಣಾ ಸಮೀಕ್ಷೆಗಳು ಕೂಡಾ ಈ ಬಾರಿ ಸಿಪಿಐ(ಎಂಎಲ್)ಗೆ ಹೆಚ್ಚಿನ ಸೀಟು ಲಭಿಸುವ ಬಗ್ಗೆ ಭವಿಷ್ಯ ನುಡಿದಿದ್ದವು, ಇಂಡಿಯಾ ಟುಡೇ – ಆಕ್ಸಿಸ್ ಚುನಾವಣಾ ಸಮೀಕ್ಷೆಯು ಸಿಪಿಐ (ಎಂಎಲ್) 12- 16 ಸೀಟುಗಳನ್ನು ಗೆಲ್ಲುವುದಾಗಿ ಭವಿಷ್ಯ ನುಡಿದಿತ್ತು.