ದೀಪಾವಳಿ-ವಿಶೇಷ ಸಾರಿಗೆ ಕಾರ್ಯಾಚರಣೆ

0

ಬೆಳಗಾವಿ, ನ. 10: ಬಲಿಪಾಡ್ಯಮಿ ನಿಮಿತ್ಯ ಸಾರ್ವತ್ರಿಕ ರಜೆಗಳು ಬಂದಿರುವ ಪ್ರಯುಕ್ತ ಬೆಂಗಳೂರಿನಿಂದ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ನವೆಂಬರ್ 13 ರಂದು

ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಹಾಗೂ ಮುಂಬಯಿ, ಪೂನಾಗಳಿಂದ ಹೆಚ್ಚಿನ ವಾಹನಗಳನ್ನು ಕಾರ್ಯಾಚರಣೆ ಮಾಡಲು ಮತ್ತು ಹಬ್ಬದ ನಂತರ ಮರಳಿ ಬೆಂಗಳೂರು, ಪೂನಾ, ಮುಂಬಯಿಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ನವೆಂಬರ್ 16 ರಂದು

ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗಿದ್ದು ಪ್ರಯಾಣಿಕರು ಇದರ ಸದುಪಯೋಗ ಪಡೆದುಕೋಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.