ಬೆಳಗಾವಿ, ನ. 10 : ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರುಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಆತಂಕಗಳು ಮಕ್ಕಳು ಅನುಭವಿಸುತ್ತಿರುವ ಗೊಂದಲಗಳು, ಮಕ್ಕಳಿಗೆ ಆಗುವಂತಹ ಭಯ/ಆತಂಕ/ಗೊಂದಲಗಳ ವಾತಾವರಣದಿಂದ ಮಕ್ಕಳು ಹೇಗೆ ಹೊರಬರಬಹುದು, ಮಕ್ಕಳಿಗೆ ಆಗುತ್ತಿರುವ ಕಷ್ಟಕರ ಅನುಭವಗಳ ಬಗ್ಗೆ ಇರುವ ದೃಷ್ಟಿಕೋನಗಳು, ಮಕ್ಕಳಿಗೆ ಈ ಕುರಿತು
ಬೇಕಾಗುವ ಧೈರ್ಯ ಈ ನಾಲ್ಕು ವಿಷಯಗಳ ಅನ್ವಯ ಮಕ್ಕಳಿಗಾಗಿ ವಿಡಿಯೋ ಕ್ಲಿಂಪಿಂಗ್ ಕನ್ನಡ, ಆಂಗ್ಲ, ಮರಾಠಿ, ನಾಗಮಿಸಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಸಿದ್ಧಪಡಿಸಲಾಗಿದೆ.
ನವೆಂಬರ್ ತಿಂಗಳ ಪ್ರತಿ ಭಾನುವಾರ ವಾರಕ್ಕೆ ಒಂದರಂತೆ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದು, ಈ ಕುರಿತಾಗಿ ಹೆಚ್ಚು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತಲುಪುವ ಉದ್ಧೇಶದಿಂದ, ರೇಡಿಯೋ, ದಿನಪತ್ರಿಕೆ, ಟ್ವೀಟರ್,
Twitter: https://twitter.com/nimhansCPC,¥ ಯೂಟುಬ್, Facebook:http://www.facebook.com/childprotectnimhans ಇನ್ಸ್ಟಾಗ್ರಾಮ್ Youtube: https://www.youtube.com/channel E£ï¸ÁÖUÁæªÀiï Instagram: https://www.instagram.com/nimhanschildprotect
ಹಾಗೂ ಇನ್ನೀತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೈಗೊಳ್ಳಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲೆ ವಿವರಿಸಿರುವ ಲಿಂಕ್ಗಳ ಮೂಲಕ ನವೆಂಬರ್ ತಿಂಗಳ ಪ್ರತಿ ಭಾನುವಾರದಂದು ಮಕ್ಕಳಿಗೆ ವಿಡಿಯೋಗಳನ್ನು ತೋರಿಸಲು ಸಾರ್ವಜನಿಕರಿಗೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಠಡಿ ಸಂಖೈ: 204, 2ನೇ ಮಹಡಿ, ಸುವರ್ಣ ವಿಧಾನಸೌಧ, ಬೆಳಗಾವಿ ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ರವೀಂದ್ರ ರತ್ನಾಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.