ಅರ್ಜಿ ಆಹ್ವಾನ

0

ಸರ್ವೋತ್ತಮ ಸೇವಾ ಪ್ರಶಸ್ತಿ: ಅವಧಿ ವಿಸ್ತರಣೆ

ಬೆಳಗಾವಿ, ನ. 10 : ರಾಜ್ಯ ಮಟ್ಟ, ಇಲಾಖಾ ಮಟ್ಟ ಮತ್ತು ಜಿಲ್ಲಾ ಮಟ್ಟದ 2020-21 ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ತಮ್ಮ ನಾಮ ನಿರ್ದೇಶನಗಳನ್ನು ಆನ್ ಲೈನ್ ಮೂಲಕ ಅಕ್ಟೋಬರ್ 31 ರವರೆಗೆ ಸಲ್ಲಿಸಲು ಕೋರಲಾಗಿತ್ತು.
ಈ ಅವಧಿಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದ್ದು, ನಾಮ ನಿರ್ದೇಶನ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಜಾಲತಾಣ http://sarvothamaawardskarnataka.gov.in/ ಅಥವಾ http://dpar.karnataka.gov.in/ ಜಾಲತಾನದಲ್ಲಿ ಮಾಹಿತಿ ವಿವರಗಳನ್ನು ದಾಖಲಿಸಬಹುದು ಯಾವುದೇ ರೀತಿಯ ಅಡಚಣೆ ಅಥವಾ ಸಂದೇಹ ಉಂಟಾದಲ್ಲಿ ಹೆಚ್ಚಿನ ಮಾಹಿತಿಗಾಗಿ 080-22230060 ಹಾಗೂ 9164500669 (ಊeಟಠಿಜesಞ) ದೂರವಾಣಿ ಮೂಲಕ ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ: ಅರ್ಜಿ ಆಹ್ವಾನ

ಬೆಳಗಾವಿ, ನ. 10 : ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ 2020-21ನೇ ಸಾಲಿನಲ್ಲಿ ಚರ್ಚ ನವೀಕರಣ/ದುರಸ್ತಿ/ಆವರಣಗೋಡೆ/ಸ್ಮಶಾನ ಆವರಣಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಅನಾಥಾಶ್ರಮ ಮತ್ತು ವೃದ್ದಾಶ್ರಮಗಳ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಪ್ರಸ್ತಾವಣೆಗಳನ್ನು ಸಲ್ಲಿಸಲು ಚರ್ಚ/ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿರುವ ಚರ್ಚಗಳ ನವೀಕರಣ/ದುರಸ್ತಿ/ ಆವರಣಗೋಡೆ/ಸ್ಮಶಾನ ಆವರಣಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಅನಾಥಾಶ್ರಮ ಮತ್ತು ವೃದ್ದಾಶ್ರಮಗಳ ನಿರ್ವಹಣೆಗೆ ಸಹಾಯಧನ ಪಡೆಯಲು ಇಚ್ಚಿಸುವ ಅರ್ಹ ಚರ್ಚ/ಸಂಸ್ಥೆಯವರು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಳಗಾವಿ ಇವರ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಪಡೆದು ಪ್ರಸ್ತಾವಣೆ ಸಲ್ಲಿಸಲು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯಕ್ಕೆ ಅಥವಾ ಕಛೇರಿ ದೂರವಾಣಿ ಸಂಖ್ಯೆ; 0831-2950349 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಉಚಿತ ಬ್ಯೂಟಿ ಪಾರ್ಲರ ತರಬೇತಿ

ಬೆಳಗಾವಿ, ನ. 10: ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ವತಿಯಿಂದ ಜಿಲ್ಲೆಯ ಗ್ರಾಮೀಣ ಯುವತಿಯರಿಗೆ ಡಿಸೆಂಬರ್ 7-12-2020 ರಿಂದ ಜನೇವರಿ 5 ರವರಗೆ 30 ದಿನಗಳ ಅವಧಿಯ ಉಚಿತಬ್ಯೂಟಿ ಪಾರ್ಲರತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಭಾಗವಹಿಸಲಿರುವ ಅಭ್ಯರ್ಥಿಗಳು 18 ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು, ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯು ಉಚಿತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಬಿಳಿ ಹಾಳೆಯ ಮೇಲೆ ಹಾಗೂ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು ವಿಳಾಸ ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಆಧಾರಕಾರ್ಡ ಮತ್ತು

ರೇಶನ್‍ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಡಿಸೆಂಬರ್ 4 ರೊಳಗಾಗಿ, ಸಿಬಿಆರ್‍ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು ಕೆನರಾ ಬ್ಯಾಂಕಗ್ರಾಮೀಣ ಸ್ವ-ಉದ್ಯೋಗತರಬೇತಿ ಸಂಸ್ಥೆ(ಸಿಬಿ ಆರ್‍ಸೆಟಿ) ಪ್ಲಾಟ ನಂ ಸಿಎ-03 (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ, ಬೆಳಗಾವಿ.ದೂರವಾಣಿ ಸಂಖ್ಯೆ0831-2440644, 9449860564, 8296792166, 8660038694, 7829601768, 9845750043.8867388906 ಇವರನ್ನು ಸಂಪರ್ಕಿಸಲು ಕೋರಲಾಗಿದೆ.///

ನವೆಂಬರ್ 17 ರಂದು: ಜಿಲ್ಲಾ ಪಂಚಾಯತ ಸಾಮನ್ಯ ಸಭೆ

ಬೆಳಗಾವಿ, ನ. 10 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯನ್ನು ನವೆಂಬರ್ 17 ರಂದು ಮುಂಜಾನೆ 11.30 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆಯಲಿದೆ.
ಸಮಯಕ್ಕೆ ಸರಿಯಾಗಿ ಸಭೆಯಲ್ಲಿ ಉಪಸ್ಥಿತರಿರಲು ಹಾಗೂ ಕೊವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗುವಾಗ ಸದಸ್ಯರು ಕಡ್ಡಾಯವಾಗಿ ಕೋವಿಡ್-19 ನಿಯಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಪಂಚಾಯತನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದರ್ಶನ. ಎಚ್.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ವತಿಯಿಂದ: ಅರ್ಜಿ ಆಹ್ವಾನ

ಬೆಳಗಾವಿ, ನ. 10: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಹಿಳಾ ಉದ್ಯಮಭಾಗ ಬೆಳಗಾವಿ (ಐಟಿಐ) ನಲ್ಲಿ ಓಅಗಿಖಿ Seಛಿಡಿeಣಚಿಡಿiಚಿಟ Pಡಿಚಿಛಿಣiಛಿe (ಸೆಕ್ರೇಟೇರಿಯಲ್ ಪ್ರ್ಯಾಕ್ಟೀಸ್), NCVTComputer Operator & Programming Assistant(ಕೋಪಾ) ಒಂದು ವರ್ಷದ ಅವಧಿಯ ವೃತ್ತಿಗಳಿಗೆ ಹಾಗೂ NCVT Electronic Mechanic (ಇಲೆಕ್ಟ್ರಾನಿಕ್ ಮ್ಯೆಕ್ಯಾನಿಕ್) ಎರಡು ವರ್ಷದ ಅವಧಿಯ ವೃತ್ತಿಗೆ ಉಳಿದ ಸೀಟುಗಳಿಗೆ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. (ಮಹಿಳಾ ಅಭ್ಯರ್ಥಿಗಳಿಗೆ ಆಧ್ಯತೆ)
ಈ ಸಂಸ್ಥೆಯಲ್ಲಿ ನವೆಂಬರ್ 10 ರಿಂದ 17 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಹಾಗೂ ಅದೇ ದಿನ ಎಲ್ಲ ಮೂಲ ದಾಖಲಾತಿ ಪ್ರತಿಗಳನ್ನು ಪರಿಶೀಲನೆಗೆ (50 ರೂ ಪರಿಶೀಲನಾ ಶುಲ್ಕ ದೊಂದಿಗೆ) ಪರೀಶಿಲನೆ ಮಾಡಿಸಿಕೊಳ್ಳಲು ಕರೆಯಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 0831-2442576 ಅಥವಾ 9632130029 ಸಂಪರ್ಕಿಸಲು ಸರ್ಕಾರಿ ಮಹಿಳಾ ಕೈಗರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///