11 ರಂದು ಬುಧವಾರ ಮಧ್ಯಾಹ್ನ 3:30 ಗಂಟೆಗೆ ನೂತನ ವಸತಿ ಕಟ್ಟಡಗಳ: ಶಂಕುಸ್ಥಾಪನಾ ಸಮಾರಂಭ

0

ಬೆಳಗಾವಿ, ನ. 10 : ನಿಪ್ಪಾಣಿಯ ಶಿಂಧೆ ನಗರದಲ್ಲಿ ಪಿ.ಎಂ.ಎ.ವವೈ-ಎ.ಎಚ್ ಯೋಜನಡಿಯಲ್ಲಿ ನಿರ್ಮಿಸಲಿರುವ 2052(ಜಿ+2) ಮಾದರಿಯ ಗುಂಪು ಮನೆಗಳ ಕಾಮಗಾರಿಯ ಶಂಕು ಸ್ಥಾಪನಾ ಸಮಾರಂಭವು ನವೆಂಬರ್ 11 ರಂದು ಬುಧವಾರ ಮಧ್ಯಾಹ್ನ 3:30 ಗಂಟೆಗೆ ನಡೆಯಲಿದೆ.
ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಶಂಕುಸ್ಥಾಪನೆ ಮಾಡಲಿದ್ದಾರೆ, ಜ್ಯೋತಿ ಪ್ರಜ್ವಲನೆ ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ನೆರವೆರಿಸಲಿದ್ದಾರೆ, ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷಣ ಸವದಿ ಘನಉಪಸ್ಥಿತರಿರುವರು, ಮುಖ್ಯ ಅಥಿತಿಗಳಾಗಿ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ ಅವರು ಉಪಸ್ಥಿತರಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶಶಿಕಲಾ ಜೊಲ್ಲೆ ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಉಪ ಸಭಾಪತಿ ವಿಶ್ವನಾಥ (ಆನಂದ) ಮಾಮನಿ, ಕರ್ನಾಟಕ ಸರ್ಕಾರ ನವದೆಹಲಿ ಪ್ರತಿನಿಧಿ ಶಂಕರಗೌಡಾ ಪಾಟೀಲ್, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಹೇಶ ಕುಮಠಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.////