ಬೆಳಗಿನ ಸಮಯದಲ್ಲಿ ಕಳ್ಳನೊಬ್ಬ ಗುದ್ದಲಿಯಿಂದ ದೇವಸ್ಥಾನಕ್ಕೆ ಹಾಕಿದ ಬೀಗ ಮುರಿದು ಕಾಣಿಕೆ ಹುಂಡಿ ಒಡೆದು ಹಣ. ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

0

ಚನ್ನಮ್ಮನ ಕಿತ್ತೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿರುವ ಶ್ರೀ ಸಾಯಿ ಬಾಬಾ ದೇವಸ್ಥಾನದಲ್ಲಿ ಶನಿವಾರ ನಸುಕಿನಲ್ಲಿ ಕಳ್ಳತನವಾಗಿದೆ.

ಬೆಳಗಿನ ಸಮಯದಲ್ಲಿ ಕಳ್ಳನೊಬ್ಬ ಗುದ್ದಲಿಯಿಂದ ದೇವಸ್ಥಾನಕ್ಕೆ ಹಾಕಿದ ಬೀಗ ಮುರಿದು ಕಾಣಿಕೆ ಹುಂಡಿ ಒಡೆದು ಹಣ ಮತ್ತು ಸಾಯಿ ಬಾಬಾ ಮೂರ್ತಿಯ ಪಕ್ಕದಲ್ಲಿ ಇರುವ ಎರಡು ಹಿತ್ತಾಳೆಯ ಚಿಕ್ಕ ದೇವರ ಮೂರ್ತಿಗಳನ್ನು ದೋಚಿ ಕಳ್ಳ ಪರಾರಿಯಾಗಿದ್ದಾನೆ.

ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಕಿತ್ತೂರು ಪೆÇಲೀಸರು ಮತ್ತು ಬೆರಳಚ್ಚು ತಂತ್ರಜ್ಞರು ಬೇಟಿನೀಡಿ ಪರಿಶೀಲಿಸಿದ್ದಾರೆ ಎಂದು ಸಾಯಿ ಬಾಬಾ ದೇವಸ್ಥಾನ ಆಡಳಿತ ಮಂಡಳಿ ಪ್ರಮುಖ ಶಿವಾನಂದ ಜಕಾತಿ ತಿಳಿಸಿದ್ದಾರೆ.