ಎಲ್ಲರಿಗೂ  ಮಂತ್ರಿ ಸ್ಥಾನ ಸಿಗತ್ತೆ ಎಂದು ಹೇಳೋಕೆ ಆಗಲ್ಲ  ಅಂತಾ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್

0

ಬೆಂಗಳೂರು: ಎಲ್ಲರಿಗೂ  ಮಂತ್ರಿ ಸ್ಥಾನ ಸಿಗತ್ತೆ ಎಂದು ಹೇಳೋಕೆ ಆಗಲ್ಲ  ಅಂತಾ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

 

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು  ನಿರ್ಧಾರ ತಗೆದುಕೊಳ್ಳುತ್ತಾರೆ.

ಮಂತ್ರಿ ಸ್ಥಾನ ನೀಡುವ ಬಗ್ಗೆ ನಾವು ಮೊದಲು  ಮಾತನಾಡಿದಂತೆಯೇ ನಡೆಯಲಿದೆ. .  ಎಲ್ಲರಿಗೂ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವುದು  ಸುಳ್ಳು.   ನನ್ನ ಮೂಲಕ ಪ್ರಭಾವ ಬೀರಿದರೆ ಏನು ಆಗದು.  ನಾನೊಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತ.  ಮಂತ್ರಿ ಸ್ಥಾನ  ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ  ಎಂದು  ಹೇಳಿದ್ದಾರೆ.

 

ಡಿಸಿಎಂ ಆಕಾಂಕ್ಷಿಯಲ್ಲ:

 

ಈಗಾಗಲೇ ನಾನು  ಸಚಿವನಾಗಿದ್ದೇನೆ.  ಹೀಗಾಗಿ ನಾನು ಉಪ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಲ್ಲ ಎಂದ ಅವರು, ಮಹರಾಷ್ಟ್ರ ರಾಜಕಾರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ಅದಕ್ಕೆ ದೊಡ್ಡ ನಾಯಕರಿದ್ದಾರೆ ಎಂದಷ್ಟೇ  ಹೇಳಿದರು.

 

ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ  ಕೈತಪ್ಪುವ ಭೀತಿ ಇದ್ದು, ಸಚಿವ ರಮೇಶ ಜಾರಕಿಹೊಳಿ   ಹೇಳಿಕೆ ಅಚ್ಚರಿ ಮೂಡಿಸಿದೆ./////