ಜನರನ್ನು ಬೆಚ್ಚಿ ಬಿಳುವಂತೆ ಮಾಡಿದೆ. ಶಾಂತವಾಗಿದ್ದ ಗದಗ ಜಿಲ್ಲೆ ಮಹಿಳೆ ಕೊಲೆ

0

ಗದಗ : ಹಾಡಹಗಲೇ ಮನೆಯಲ್ಲಿ ಒಂಟಿ ಮಹಿಳೆ ಕೊಲೆಯಾಗಿದ್ದು, ಗದಗ ಜಿಲ್ಲೆಯ ಜನರನ್ನು ಬೆಚ್ಚಿ ಬಿಳುವಂತೆ ಮಾಡಿದೆ.

ಶಾಂತವಾಗಿದ್ದ ಗದಗ ಜಿಲ್ಲೆ ಮಹಿಳೆ ಕೊಲೆ ಎಲ್ಲರಲ್ಲೂ ನಡುಕ ಹುಟ್ಟಿಸಿದೆ.

 

ನಗರದ  ಕೆಸಿ ರಾಣಿ ರಸ್ತೆಯ ಮನೆಯೊಂದರಲ್ಲಿದ್ದ ಪುಷ್ಪಾ ಹೆಬಸೂರ(65) ಕೊಲೆಯಾದ ಮಹಿಳೆ. ಈ ಮಹಿಳೆಗೆ ನಾಲ್ಕು ಜನ ಹೆಣ್ಣು ಮಕ್ಕಳು ಇದ್ದಾರೆ.ನಾಲ್ಕು ಜನರನ್ನು ಮದುವೆ ಮಾಡಿಕೊಟ್ಟಿದ್ದಾಳೆ.

 

ಬೆಳಿಗಿನ ಜಾವ ಶಿವಮೊಗ್ಗದಲ್ಲಿರುವ ಮಗಳು ಪೋನ್ ಮಾಡಿದ್ದಾರೆ. ಮೊದಲ ಮಾತನಾಡಿದ್ದಾರೆ, ಬಳಿಕ ಪೋನ್ ಕಾಲ್ ತೆಗೆದಿಲ್ಲ.  ಆಗ ಪೋನ್ ರಿಸಿವ್ ಮಾಡದೆ ಇದ್ದಾಗ, ಅದೇ ಊರಲ್ಲಿ ಇರುವ ಸಹೋದರಿಗೆ ಕರೆ ಮಾಡಿ ತಿಳಿಸಿದ್ದಾರೆ.

 

ಮನೆ ಹತ್ತಿರ ಮಗಳ ಸಂಬಂಧಿಕರು ದೌಡಾಯಿಸಿದ್ದಾರೆ. ಮನೆ ಬೀಗ ಹಾಕಿದೆ.ಆಗ ಪುಷ್ಪಾ ಅವರನ್ನು ಹುಡುಕಾಡಿದ್ದಾರೆ. ಕೊನೆಗೆ ಬಾಗಿಲು ಹಾಕಿದ್ದ ಮನೆಯ ಬೀಗ ಒಡೆದು ಒಳಗೆ ಹೋದಾಗ, ಮಕ್ಕಳು ಬೆಚ್ಚಿ ಬಿಳುವಂತೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಬಿದ್ದಿತ್ತು. ಆದರೆ ಕೊಲೆ ಯಾರು ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.

 

ಸ್ಥಳಕ್ಕೆ ಆಗಮಿಸಿದ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಪ್ರಲ್ಹಾದ್ ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಗೈದು ಪರಾರಿಯಾದವರು ಯಾವುದೇ ಸುಳಿವು ಸಿಗದಂತೆ ಕೊಲೆ ಮಾಡಿದ್ದಾರೆ. ಈ ಪ್ರಕರಣ ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.