ಬ್ಯಾಟರಿ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

0
ಅಥಣಿ:  ಮೊಬೈಲ್ ಟವರ್ ಗಳಲ್ಲಿನ  ಬ್ಯಾಟರಿ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
 
ಸುಕುಮಾರ ಭೀಮಪ್ಪ ಬಡಿಗೇರ,  ಶಶಿಕಾಂತ ಸುರೇಶ ಶೀಬಾಗೊಳ,  ಶ್ರೀಶೈಲ ಮಲ್ಲಪ್ಪಾ ದೇಸಾಯಿ,  ಅನೀಲ ನಬಿಸಾಬ ಶಿಕ್ಕಲಗಾರ ಬಂಧಿತ ಆರೋಪಿಗಳು.

ತಾಲೂಕು ಹಾಗೂ ಸುತ್ತಮುತ್ತಲಿನ ಮೊಬೈಲ್ ಟವರ್ ಗಳಲ್ಲಿ ಬ್ಯಾಟರಿ ಕಳ್ಳತನ ಮಾಡುತ್ತಿದ್ದರು.  ಖಚಿತ ಮಾಹಿತಿ  ಮೇರೆಗೆ ಪೊಲೀಸರು ದಾಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಐಗಳಿ,  ರಾಯಬಾಗ  ಹಾಗೂ ಕುಡಚಿ ಪೊಲೀಸ್ ವ್ಯಾಪ್ತಿ ಕಳ್ಳತನ ಮಾಡಿದ್ದ  ಒಟ್ಟು  14 ಮೊಬೈಲ್ ಟವರ್ ಬ್ಯಾಟರಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.   ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.