ಸಂಜಯ ಪಾಟೀಲ, ಮಾಜಿ ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರ ವಿಶೇಷ ಪ್ರಯತ್ನದಿಂದಾಗಿ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯ ಕಟ್ಟಡ ಕಟ್ಟಲು ಜಮೀನು ಮಂಜೂರಿ

0

ಬೆಳಗಾವಿ: ಶ್ರೀ ಸಂಜಯ ಪಾಟೀಲ, ಮಾಜಿ ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ಜಿಲ್ಲೆಗೆ ಸ್ವಂತ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯ ಕಟ್ಟಡ ಕಟ್ಟಲು ಜಮೀನು ಮಂಜೂರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ.

ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ದೊಡ್ಡ ಜಿಲ್ಲೆಯಾಗಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯ, ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಬೆಳಗಾವಿ ಮಹಾನಗರ ಜಿಲ್ಲೆಯಲ್ಲಿರುವಂತಹ ಎಲ್ಲ ಕಾರ್ಯಕರ್ತರಿಗೂ ಬೆಳಗಾವಿಯಲ್ಲಿ ತಮ್ಮದೇ ಆದ ಒಂದು ಸ್ವಂತ ಬಿಜೆಪಿ ಪಕ್ಷದ ಕಾರ್ಯಾಲಯ (ಪಾರ್ಟಿ ಆಪೀಸ) ಇರಬೇಕೆಂಬುದು ಬಹುದಿನಗಳ ಆಸೆಯಾಗಿತ್ತು,

ಇವತ್ತು ಆ ಆಸೆ ಈಡೇರುತ್ತಿರುವುದು ಸಂತಸ ತಂದಿದೆ. ಬೆಳಗಾವಿ ನಗರದ ಧರ್ಮನಾಥ ಭವನದ ಹಿಂದೆ ಇರುವ ಮಹಾನಗರ ಪಾಲಿಕೆಯ ಜಾಗದ 30 ಗುಂಟೆ ಭೂಮಿಯನ್ನು ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯ ಕಟ್ಟಡ ಕಟ್ಟಲು ನೀಡಲು ಇವತ್ತಿನ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುತ್ತದೆ.

ವಿಶೇಷವಾಗಿ ನಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ ರಮೇಶ ಜಾರಕಿಹೊಳಿ ಇವರ ಪ್ರಯತ್ನ, ಶ್ರೀ. ಸಿ. ಟಿ. ರವಿ ಹಾಗೂ ಜಿಲ್ಲೆಯಲ್ಲಿರುವಂತಹ ಎಲ್ಲ ಮಂತ್ರಿಗಳ ಹಾಗೂ ಶಾಸಕರುಗಳ ಸಹಕಾರದಿಂದ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯವನ್ನು ಕಟ್ಟಲು ಜಮೀನು ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದ್ದು,

ಬಹಳ ಬೇಗನೆ ಅಲ್ಲಿ ಕಟ್ಟಡ ನಿರ್ಮಾಣ ಮಾಡುವ ಕೆಲಸ ಪ್ರಾರಂಭವಾಗುತ್ತದೆ ಎಂದು ನಮ್ಮ ಎಲ್ಲ ಕಾರ್ಯಕರ್ತರಿಗೂ ತಿಳಿಸಲು ನನಗೆ ಬಹಳ ಖುಷಿಯಾಗುತ್ತಿದೆ ಎಂದು ಹರ್ಷವ್ಯಕ್ತಪಡಿಸಿ, ಈ ಪ್ರಯತ್ನಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.