ಸರಕಾರಿ ಪ್ರೌಡ ಶಾಲೆಯಲ್ಲಿ ಪುರಸ್ಕಾರ ಪುರಸ್ಕಾರ ಸಮಾರಂಭ ಜರುಗಿತು

0

ಚನ್ನಮ್ಮನ ಕಿತ್ತೂರು: ಹಿರೇ ನಂದಿಹಳ್ಳಿ ಸರಕಾರಿ ಪ್ರೌಡ ಶಾಲೆಯಲ್ಲಿ ಬುಧವಾರ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.
ಕರ್ನಾಟಕ ರಾಜ್ಯ ಪ್ರೌಡಶಾಲಾ ಸಹ ಶಿಕ್ಷಕರ ಸಂಘ ಮತ್ತು ಕಿತ್ತೂರು ಕ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಶ್ರೀ ನಾಗಭೂಷಣ

ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ, ದ್ವಿತೀಯ ಮತ್ತು ತೃತಿಯ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವ ಮಾಸದ  ಅಂಗವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಅತಿಥಿಗಳಗಿ ಬಿ.ಆರ್.ಸಿ ಶಿವಶಂಕರ ಹಾದಿಮನಿ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ ವಹಿಸಿ ವಿದ್ಯಾರ್ಥಿಗಳನ್ನ ಗೌರವಿಸಿ ಸತ್ಕರಿಸಿದರು.

ಅಧ್ಯಕ್ಷತೆ ವಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ ಪಠ್ಯ ಪುಸ್ತಕ ಪಠ್ಯ ಕ್ರಮವನ್ನು ಹೇಗೆ ಭೋದಿಸಬೇಕು, ಯಾವ ರೀತಿಯಾದ ಸಂಪನ್ಮೂಲಗಳನ್ನು ಅಳವಡಿಸಕೊಳ್ಳಬೇಕು ಭೋದನೆಯಲ್ಲಿ ಅಂತರ್ಜಾಲ, ಪೋಟೋ, ವಿಡಿಯೋಗಳನ್ನು ಬಳಕೆ ಮಾಡಬೇಕು ಎಂದು ಅರ್ಥೈಸಿಕೊಟ್ಟರು.

ಈ ವೇಳೆ ಸಮಾಜ ವಿಜ್ಞಾನ ಕಾರ್ಯಾಗಾರ ಐತಿಹಾಸಿಕ ಘಟನೆಗಳ ಉದ್ದೇಶಿಸಿ ತುರಕರ ಶೀಗಿಹಳ್ಳಿ ಸರಕಾರಿ ಪ್ರೌಡ ಶಾಲೆಯ ಮುಖ್ಯೋಪಾದ್ಯಾಯ ಮಹೇಶ ಚನ್ನಂಗಿ ಮಾತನನಾಡಿದರು.

ಕಸಾಪ ಅಧ್ಯಕ್ಷ ಸೋಮಶೇಖರ ಹಲಸಗಿ ಪ್ರಾಸ್ತಾವಿಕವಾಗಿ ಮಾತನಾಡಿ ಇದೆ ವೇಳೆ ಹಿರೇ ನಂದಿಹಳ್ಳಿ ಪ್ರೌಡಶಾಲೆಯ ಮುಖ್ಯೋಪಾದ್ಯಯ ಬಿ.ಸಿ. ಬಿದರಿ ಅವರು ಕಿತ್ತೂರು ಗುರು ಭವನ ನಿರ್ಮಾಣಕ್ಕೆ 20 ಸಾವಿರ ರೂ ಚೆಕ್ಕು ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಸಹ ಶಿಕ್ಷಕರಾದ ಸಿ.ಎಮ್. ಮುರಗೋಡ, ಆರ್. ಎಸ್. ಪಾಟೀಲ, ಬಿ.ಡಿ. ಹಲೆಗೆಪ್ಪನವರ, ಬಾಬು ಭಜಂತ್ರಿ ಸೇರಿದಂತೆ ಇನ್ನೂ ಅನೇಕ ಶಿಕ್ಷಕರು ಇದ್ದರು.