ಪಿಎಚ್‍ಡಿ, ರ್ಯಾಂಕ್ ವಿಜೇತರಿಗೆ ಪತ್ರಗಳ ಪ್ರದಾನ ಸಮಾರಂಭದಲ್ಲಿ ಹೇಳಿಕೆ ಪಿಎಚ್‍ಡಿ, ರ್ಯಾಂಕ್‍ಗಳು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶಿಯಾಗಲಿ: ಶಾಸಕ ಸತೀಶ ಜಾರಕಿಹೊಳಿ

0

ಬೆಳಗಾವಿ: ತಾವು ಕಷ್ಟಪಟ್ಟು ಸಂಪಾದಿಸಿದ ಡಾಕ್ಟರೇಟ್ ಮತ್ತು ಪದವಿ ರ್ಯಾಂಕ್‍ಗಳು ನೀವು ಬದುಕುತ್ತಿರುವ ಸಮಾಜವನ್ನು ಇನ್ನಷ್ಟು ಸದೃಢವಾಗುವಂತೆ ಕಟ್ಟಲು ಸದುಪಯೋಗವಾಗಲಿ. ನಿಮ್ಮ ಪಾಲಕರು ಪಟ್ಟ ಕಷ್ಟ ಮತ್ತು ತಾವು ಕಂಡ ಕನಸು ನಿಮ್ಮ ಮುಂದಾಲೋಚನೆಯಿಂದ ಮುಂದಿನ ಪೀಳಿಗೆಗೆ ಸಮರ್ಥ ಬುನಾದಿಯಾಗುವಂತೆ ಸಾರ್ಥಕ ಪಡಿಸಿಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ಪದವಿ ಪುರಸ್ಕøತರಿಗೆ ಕಿವಿಮಾತು ಹೇಳಿದರು.

ಅವರಿಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈ ಸಾಲಿನ ಪಿಎಚ್.ಡಿ ಪದವೀಧರರು ಮತ್ತು ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು ಎμÉ್ಟೂೀ ಸಾರಿ ಪಿಎಚ್ ಡಿ ಮತ್ತು ರ್ಯಾಂಕ್ ಇತ್ಯಾದಿ ಪದವಿ ಪಡೆಯದ ಅವಕಾಶ ವಂಚಿತರೇ ಅನೇಕ ಸಾಧನೆಗಳನ್ನು ಮಾಡುತ್ತಾರೆ ಹೀಗಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಸಾಮಾಜಿಕ ಜವಾಬ್ದಾರಿ ಎಲ್ಲದಿಕ್ಕಿಂತ ದೊಡ್ಡ ಜವಾಬ್ದಾರಿ. ಕ್ರಿ.ಪೂರ್ವ 6ನೇ ಶತಮಾನದ ಗೌತಮ ಬುದ್ಧನಿಂದ ಪ್ರಾರಂಭವಾಗಿರುವ ಸಾಮಾಜಿಕ ಸಂಘರ್ಷ ಇನ್ನೂ ನಡೆಯುತ್ತಲೇ ಇದೆ, ನಿಮ್ಮಂತ ವಿದ್ಯಾವಂತರು ಬುದ್ದ ಬಸವಣ್ಣ ಅಂಬೇಡ್ಕರ್ ಅವರ ಹೋರಾಟದ ಆಶಯಗಳನ್ನು ತಿಳಿಸುವುದμÉ್ಷೀ ಅಲ್ಲ ಬದುಕಿನ ಭಾಗವಾಗಿಸಬೇಕು, ನಿಮ್ಮ ಗಳಿಕೆಯ ಒಂದು ಭಾಗ ಸಾಮಾಜಿಕ ಸುಧಾರಣೆಗಾಗಿ ಮೀಸಲಿಡಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಎಮ್ . ರಾಮಚಂದ್ರಗೌಡ ಅವರು ಮಾತನಾಡಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮೊದಲ ಆದ್ಯತೆ ಕೊಡುತ್ತದೆ, ಕೋವಿಡ್ – 19ರ ನಿಯಮಗಳನ್ವಯ ಅಕ್ಟೋಬರ್ 5 ರಂದು ಕೆಲವರಿಗೆ ಮಾತ್ರ ರಾಜ್ಯಪಾಲರಿಂದ ಅಂದು ಪ್ರಮಾಣ ಪತ್ರ ನೀಡಲಾಗಿತ್ತು, ಈಗ ಈ ಸಮಾರಂಭ ಹಮ್ಮಿಕೊಂಡಿದ್ದೇವೆ. ನಮ್ಮ ಕಾಲದಲ್ಲಿ ಅನುಕೂಲಗಳಿರಲಿಲ್ಲ, ನಾವು ತಮ್ಮಂತೆ ಯಾರ್ಂಕ್ ಪಡೆಯಲೂ ಆಗಲಿಲ್ಲ, ನಿಮಗೆ ಅನೇಕ ಅನುಕೂಲಗಳಿವೆ, ನಿಮ್ಮ ಪ್ರತಿಭೆಗೆ ಜಾಗತಿಕವಾಗಿ ಅನೇಕ ಅವಕಾಶಗಳಿವೆ ನಿಮ್ಮಲ್ಲಿನ ಕೌಶಲ್ಯಗಳ ಮೂಲಕ ಅವನ್ನು ನಿಮ್ಮದಾಗಿಸಿಕೊಳ್ಳಿ, ಹೆಚ್ಚಿನ ಪರಿಶ್ರಮ ಸುಖೀ ಸಮಾಜಕ್ಕೆ ಕಾರಣವಾಗುತ್ತದೆ, ಅದನ್ನು ಸಾಧಿಸಿ ತೋರಿಸಿ ಎಂದು ಹಾರೈಸಿದರು.

ವಿವಿಧ ವಿಭಾಗಗಳ ಪಿಎಚ್.ಡಿ ಪದವೀಧರರಿಗೆ ಹಾಗೂ ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪುರಸ್ಕøತರು ತಮ್ಮ ಸಾಧನೆಯ ಸಂಗತಿಗಳನ್ನು ಹಂಚಿಕೊಂಡರು. ಮೌಲ್ಯಮಾಪನ ಕುಲಸಚಿವ ಡಾ. ಎಸ್ ಎಂ ಹುರಕಡ್ಲಿ ಅವರು ಸ್ವಾಗತಿಸಿದರು, ಹಣಕಾಸು ಅಧಿಕಾರಿ ಡಾ. ಡಿ ಎನ್ ಪಾಟೀಲ ಅವರು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳ ಪರಿಚಯ

ಮಾಡಿದರು. ಸಮಾರಂಭದಲ್ಲಿ ಕುಲಸಚಿವ ಡಾ. ಬಸವರಾಜ ಪದ್ಮಶಾಲಿ, ಸಿಂಡಿಕೇಟ್ ಸದಸ್ಯರಾದ ಆನಂದ ಹೊಸೂರು, ಅನಿಲ್ ದೇಸಾಯಿ, ಶ್ರಿನಿವಾಸ ಶಾಸ್ತ್ರಿ, ನದಾಫ್ ಅವರುಗಳು ವೇದಿಕೆಯಲ್ಲಿದ್ದರು. ಕುಲಪತಿಗಳ ವಿಶೇμÁಧಿಕಾರಿ ಡಾ ಎಂ ಜಯಪ್ಪ, ಡಾ. ರಾಜಪ್ಪ ದಳವಾಯಿ, ಡಾ. ಎಸ್ ಎಂ ಗಂಗಾಧರಯ್ಯ, ಡಾ. ಯಲ್ಲಪ್ಪ ಹಿಮ್ಮಡಿ, ಡಾ. ಎಚ್ ಐ ತಿಮ್ಮಾಪೂರ, ಡಾ. ಬಲವಂತಗೋಳ, ಡಾ. ಕೆ ಎಲ್ ಎನ್ ಮೂರ್ತಿ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗದವರಿದ್ದರು.
ಡಾ. ಮೈತ್ರಾಯಣಿ ಗದಿಗೆಪ್ಪಗೌಡರ, ರಷ್ಮಿ ಪೈ ಕಾರ್ಯಕ್ರಮ ನಿರೂಪಿಸಿದರು. ಡಾ.ನಂದಿನಿ ದೇವರಮನಿ ವಂದಿಸಿದರು.