ಅತ್ಯಾಚಾರ ಎಸಗಿದ್ದ 5 ಜನ ಆರೋಪಿಗಳಿಗೆ ಶುಕ್ರವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬೆಳಗಾವಿ : ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ 5 ಜನ ಆರೋಪಿಗಳಿಗೆ ಶುಕ್ರವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮುತ್ಯಾನಟ್ಟಿಯ ಸಂಜು ಪ ದಡ್ಡಿ (24), ಸುರೇಶ ದಡ್ಡಿ(24), ಸುನೀಲ ಡುಮ್ಮಗೋಳ(21), ಮಣಗುತ್ತಿಯ ಮಹೇಶ ಶಿವಣ್ಣಗೋಳ(23), ಶಹಾಪುರದ ಸೋಮಶೇಖರ ದುರದುಂಡೇಶ್ವರ(23) ಅಪರಾಧಿಗಳಿಗೆ ೩ನೇ ಅಧಿಕ ಜಿಲ್ಲಾ ಸತ್ರ ಮತ್ತು ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ ?
2017ರಲ್ಲಿ ಮುತ್ಯಾನಟ್ಟಿ ಗುಡ್ಡ ಪ್ರದೇಶದಲ್ಲಿ ಪ್ರೇಮಿಗಳು ಸುತ್ತಾಡಲು ಹೋಗಿದ್ದರು. ಈ ವೇಳೆ ಐವರು ಅಪರಾಧಿಗಳು ಪ್ರೇಮಿಗಳ ಮೇಲೆ ದೌರ್ಜನ್ಯ ನಡೆಸಿ, ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಜೀವ ಬೇದರಿಕೆಯನ್ನು ಹಾಕಿದ್ದರು. ಕೊನೆಗೆ ಅಪ್ರಾಪ್ತೆಯ ಪೋಷಕರು ಕಾಕತಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ಕೋರ್ಟ್ ಮುಂದೆ ಹಾಜರು ಪಡೆಸಿದ್ದರು.
ಪ್ರಕರಣ ನಡೆಸಿದ ನ್ಯಾಯಾಧೀಶರಾದ ಮಂಜಪ್ಪ ಅಣ್ಣಯ್ಯನವರ ಪೋಕ್ಸೋ ಕಾಯ್ದೆಯಡಿ ಐವರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ, 5ಲಕ್ಷ₹ದಂಡವನ್ನೂ ವಿಧಿಸಲಾಗಿದೆ.