ಪ್ರತಿಯೊಬ್ಬ ಯೋಧರಿಗೂ ರಾಹುಲ್ ನಮನ

0

ನವದೆಹಲಿ: ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿದೆ.  ಪಾಕ್ ಸೈನಿಕರನ್ನು ಕೊಂದ ಭಾರತ ದಿಟ್ಟ ಹೋರಾಟ ಮಾಡಿದೆ. ಈ ವೇಳೆ ಭಾರತದ ನಾಲ್ವರು ಹುತಾತ್ಮರಾಗಿದ್ದಾರೆ. ಅವರ ತ್ಯಾಗಕ್ಕೆ ನಮಸ್ಕರಿಸುವೆ ಹಾಗೂ ದೇಶದ ಭದ್ರತೆಯಲ್ಲಿ ತೊಡಗಿರುವ ಭಾರತೀಯ ಸೈನ್ಯದ ಪ್ರತಿಯೊಬ್ಬ ಯೋಧರಿಗೂ ನಮಸ್ಕರಿಸುವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಟ್ವೀಟ್‍ನಲ್ಲಿ ಹೇಳಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ಸೇನಾ ಸೈನಿಕರು ಮತ್ತು ಓರ್ವ ಬಿಎಸ್‍ಎಫ್ ಜವಾನ್ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದಾಗಲೆಲ್ಲಾ ಅದರ ಭಯ ಮತ್ತು ದೌರ್ಬಲ್ಯಗಳು ಇನ್ನಷ್ಟು ಸ್ಪಷ್ಟವಾಗುತ್ತವೆ ಎಂದು ಅವರುಹೇಳಿದ್ದಾರೆ.