ಶಾಸಕರೊಬ್ಬರ ಪುತ್ರ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ  ನಡೆದಿದೆ.

0

ಬುಲಂದ್ ಶಹರ್:   ಉತ್ತರ ಪ್ರದೇಶದ ಬಿಜೆಪಿ ಹಿರಿಯ  ಶಾಸಕರೊಬ್ಬರ ಪುತ್ರ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ  ನಡೆದಿದೆ.

 

ಜೆವಾರ್ ಕ್ಷೇತ್ರದಿಂದ  ಮೂರು ಬಾರಿ ಶಾಸಕರಾಗಿ  ಆಯ್ಕೆಯಾಗಿದ್ದ ಹೊರಮ್ ಸಿಂಗ್ ಅವರ ಪುತ್ರ ಮಹೇಶ್  ಆತ್ಮಹತ್ಯೆಗೆ ಶರಣಾದವರು.

 

ಶಾಸಕರ ಮಗನ ಶವ ಮನೆಯಲ್ಲಿ ದೊರೆತಿದೆ.   ಗುಂಡು ಹೊಡೆದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

 

ಘಟನೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.  ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು  ಪೊಲೀಸ್ ಅಧಿಕಾರಿಗಳು  ತಿಳಿಸಿದ್ದಾರೆ.