ಯುವಕನೊಬ್ಬ  ಬಳಿಕ  ತನ್ನ   ಸಹೋದರಿಗೆ ನಿಶ್ಚಯವಾಗಿದ್ದ ವಿವಾಹ ಮುರಿದು ಬಿದ್ದ  ಹಿನ್ನೆಲೆ  ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ನಡೆದಿದೆ. 

0

ಮೈಸೂರು:   ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ  ನೊಂದಿದ್ದ ಯುವಕನೊಬ್ಬ  ಬಳಿಕ  ತನ್ನ   ಸಹೋದರಿಗೆ ನಿಶ್ಚಯವಾಗಿದ್ದ ವಿವಾಹ ಮುರಿದು ಬಿದ್ದ  ಹಿನ್ನೆಲೆ  ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದ ಯುವಕ ಚೇತನ ಶರ್ಮಾ(29)  ಎಂಬಾತ ಮೈಸೂರಿನ ವಿಜಯಪುರಶ್ರೀ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೇತನ ಕಳೆದ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೇಮಿಸುತ್ತಿದ್ದರು. ಆದ್ರೆ  ಇಬ್ಬರ ಮಧ್ಯೆ ಬಿರುಕು ಮೂಡಿದ್ದು, ಮದುವೆ ಮುರಿದು ಬಿದ್ದಿತ್ತು.  ಇದರಿಂದ ತೀವ್ರವಾಗಿ  ಆತ  ಮನನೊಂದಿದ್ದ. ಇತ್ತೀಚಿಗೆ ಆತನ  ಸಹೋದರಿಗೆ ಮದುವೆ ನಿಶ್ಚಯವಾಗಿತ್ತು. ಆದ್ರೆ ಅದೂ ಕೂಡ ಮುರಿದು ಬಿದ್ದಿದೆ.

ಒಂದರ ಮೇಲೆ ಒಂದರಂತೆ ಕಷ್ಟ ಅನುಭವಿಸಿದ ಚೇತನ ಇದೀಗ  ಬದುಕನ್ನೇ ಅಂತ್ಯಗೊಳಿಸಿದ್ದಾನೆ.

ಈ ಕುರಿತು ಜಯಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ   ದೂರು ದಾಖಲಾಗಿದೆ.