ತಮ್ಮ ಸಹೋದರ ಉಮೇಶ ಕತ್ತಿ ವಜ್ರದಂತೆ, ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ  ಅವರಿಗೆ ಮಂತ್ರಿ ಪಟ್ಟ ದೊರೆಯಲಿದೆ ಎಂದು ಡಿಸಿಸಿ  ಬ್ಯಾಂಕ್ ನಿಯೋಜಿತ ಅಧ್ಯಕ್ಷ ರಮೇಶ ಕತ್ತಿ

0

ಬೆಳಗಾವಿ:  ತಮ್ಮ ಸಹೋದರ ಉಮೇಶ ಕತ್ತಿ ವಜ್ರದಂತೆ, ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ  ಅವರಿಗೆ ಮಂತ್ರಿ ಪಟ್ಟ ದೊರೆಯಲಿದೆ ಎಂದು ಡಿಸಿಸಿ  ಬ್ಯಾಂಕ್ ನಿಯೋಜಿತ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಗೆ ಕಾರಣವಾದ 17 ಜನ ಶಾಸಕರಿಗಾಗಿ ನಮ್ಮ ಸಹೋದರ ತ್ಯಾಗ ಮಾಡಿದ್ದಾರೆ. ಪಕ್ಷ ನಮಗೆ ಬೇಕಾದನ್ನು ನೀಡಿದೆ. ಅದಕ್ಕಾಗಿ ನಾವೂ ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ. ಮುಂದಿನ  ದಿನಮಾನಗಳಲ್ಲಿ  ಸಹೋದರನಿಗೆ ಹೈಕಮಾಂಡ್  ಸೂಕ್ತ ಸ್ಥಾನಮಾನ ನೀಡಲಿದೆ ಎಂದರು .