ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್‍ಎಸ್‍ನ ಪಾತ್ರವೇನಿದೆ ಅವರ ಬಲಿದಾನವೇನಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

0

ಬೆಂಗಳೂರು: ಸುಳ್ಳು ಹುಟ್ಟಿದ್ದೇ ಆರ್ ಎಸ್ ಎಸ್ ನಿಂದ, ಸುಳ್ಳು ಹೇಳುವುದೇ ಆರ್ ಎಸ್‍ಎಸ್‍ನ ಅಜೆಂಡವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್‍ಎಸ್‍ನ ಪಾತ್ರವೇನಿದೆ ಅವರ ಬಲಿದಾನವೇನಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಆರ್ ಎಸ್‍ಎಸ್‍ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.

ನೆಹರು ನಿಧನರಾದಾಗ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತದ ಹರಿಕಾರ ಎಂದು ಬರೆದಿತ್ತು. ಇದನ್ನು ನೆಹರು ಹೇಳಿ ಬರೆಸಿದ್ರಾ.? ನೆಹರು ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್‍ಎಸ್‍ನ ಪಾತ್ರ, ಬಲಿದಾನವೇನು.?

ನೆಹರು ಅಲ್ಪಸಂಖ್ಯಾತರು ತಳವೂರುವಂತೆ ಮಾಡಿದರು. ಆದರೆ ಬಿಜೆಪಿಯು ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ನೆಹರು ಕುಟುಂಬ ಪ್ರಾಣತ್ಯಾಗ ಮಾಡಿದೆ. ಆದರೆ ಬಿಜೆಪಿ ಇದನ್ನು ಎಲ್ಲಿಯೂ ಹೇಳಲ್ಲ. ಭಗತ್ ಸಿಂಗ್, ವಿವೇಕಾನಂದರ ಹೆಸರು ಮುಂದೆ ತರ್ತಾರೆ, ಪಟೇಲರ ಪ್ರತಿಮೆ ಮಾಡಿ ಆರ್ ಎಸ್‍ಎಸ್‍ನ ಅಂತಾರೆ…ಇವರೆಲ್ಲ ಆರ್ ಎಸ್‍ಎಸ್‍ನಿಂದ ಬಂದವರಾ ಎಂದು ಗುಡುಗಿದರು.