ಸಿಲಿಕಾನ್ ಸಿಟಿಯಲ್ಲಿ ನಗರದಲ್ಲಿ ಪಟಾಕಿಯಿಂದ ಮೂವರು ಮಕ್ಕಳು ಗಾಯ

0

ಬೆಂಗಳೂರು, ನ. 15-  ದೀಪಾವಳಿ ಮೊದಲ ದಿನವೇ (ಶನಿವಾರ) ಸಿಲಿಕಾನ್ ಸಿಟಿಯಲ್ಲಿ ನಗರದಲ್ಲಿ ಪಟಾಕಿಯಿಂದ ಮೂವರು ಮಕ್ಕಳು ಗಾಯ ಗೊಂಡಿದ್ದಾರೆ.

ಮಾಗಡಿಯ ತನೀಶ್ (7), ರಾಜಾಜಿನಗರದ ಅನ್ಷುಮಾ (5) ಹಾಗೂ ವಿಜಯಾನಂದ ನಗರದ ಸುಹೇಲ್ (12) ಪಟಾಕಿ ಸಿಡಿಸುವ ವೇಳೆ ಗಾಯ ಗೊಂಡಿದ್ದಾರೆ.

ತನೀಶ್ ಮತ್ತು ಅನ್ಷುಮಾ ನಗರದ ನಾರಾಯಣ ನೇತ್ರಾಲಯದ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸುಹೇಲ್‌ಗೆ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು, ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.