ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಮುಚ್ಚಲ್ಪಟ್ಟಿದ್ದಂತ ಕಾಲೇಜುಗಳನ್ನು ಆರಂಭಗೊಳ್ಳಲಿವೆ.

0

ಬೆಂಗಳೂರು : ನವೆಂಬರ್ 17 ರಿಂದ ಅಂದ್ರೆ ನಾಳೆಯಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಮುಚ್ಚಲ್ಪಟ್ಟಿದ್ದಂತ ಕಾಲೇಜುಗಳನ್ನು ಆರಂಭಗೊಳ್ಳಲಿವೆ.

ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಡಾ. ಅಶ್ವತ್ಥನಾರಾಯಣ ಮಾತನಾಡಿದ್ದು, ಕೋವಿಡ್ ನಿಯಮಗಳನ್ನು ಎಲ್ಲ ಕಾಲೇಜುಗಳು‌ ಪಾಲಿಸಬೇಕು ಎಂದು ಹೇಳಿದ್ದಾರೆ.

 

ಈ ನಿಯಮ ಪಾಲನೆ ಕಡ್ಡಾಯ

 

1) ಪ್ರತಿ ವಿದ್ಯಾರ್ಥಿ ಸ್ಯಾನಿಟೈಸ್ ಮಾಡುವುದು ಹಾಗೂ ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಲೇಬೇಕು ಜೊತೆಗೆ ವರದಿ ನೆಗೆಟಿವ್ ಇರಬೇಕು ಎಂದು ಹೇಳಿದರು.

 

2) ಕಾಲೇಜು ಆವರಣ ಹಾಗೂ ತರಗತಿ ಒಳಗೆ ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಾಲೇಜು ಆವರಣ ಹಾಗೂ ತರಗತಿ ಒಳಗೆ ಕೋವಿಡ್

 

3) . ಪೋಷಕರೂ ಧೈರ್ಯವಾಗಿರಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡೇ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಕೋವಿಡ್ ನಿಯಮಗಳನ್ನು‌ ಪಾಲಿಸದ ಕಾಲೇಜುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದ್ದಾರೆ.

 

ರಾಜ್ಯ ಸರ್ಕಾರ ಕೇವಲ ಪದವಿ ಕಾಲೇಜುಗಳನ್ನು ನಾಳೆಯಿಂದ ಆರಂಭಿಸುತ್ತಿದೆ. ಶಾಲೆಗಳ ಆರಂಭ ವಿಚಾರವಾಗಿ ಮಾತುಕತೆ ನಡೆಯುತ್ತಿದೆ.

ಇದೀಗ ನಾಳೆಯಿಂದ ಸತತ ಏಳು ತಿಂಗಳುಗಳ ಬಳಿಕ ಪದವಿ ಕಾಲೇಜುಗಳು ಆರಂಭವಾಗಲಿವೆ.