ಕಾಲೇಜಿನತ್ತ ಸುಳಿಯದ ವಿದ್ಯಾರ್ಥಿಗಳು

0

ಬೆಳಗಾವಿ, ನ. 17- ಎಂಟು ತಿಂಗಳ ಬಳಿಕ ಪದವಿ ಕಾಲೇಜುಗಳು ಇಂದು ಪುನರಾರಂಭಗೊಂಡಿದ್ದು, ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೋವಿಡ್ – 19 ಕಾರಣದಿಂದ ಕಾಲೇಜುಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಾಗಿದ್ದಾರೆ. ವಿದ್ಯಾರ್ಥಿಗಳಿಗಾಗಿ ಕಾಯುತ್ತಾ ಕುಳಿತಿದ್ದಾರೆ.

ವಿದ್ಯಾರ್ಥಿಗಳು ಕೋವಿಡ್ ಪ್ರಮಾಣ ಪತ್ರ ತರುವುದು ಕಡ್ಡಾಯಗೊಳಿಸಲಾಗಿದೆ. ಅವರಿಗೆ ಪರೀಕ್ಷೆ ಎಲ್ಲಿ ಮಾಡಿಸಬೇಕು ಎನ್ನುವ ಗೊಂದಲ ಅವರಲ್ಲಿ ಉಂಟಾಗಿದೆ. ಹಬ್ಬದ ಕಾರಣ ಹಾಗೂ ಸಾಲು ಸಾಲು ರಜೆಗಳು ಬಂದಿದ್ದರಿಂದ ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಪಡೆಯುವುದು ಅವರಿಗೆ ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶದ ಬಹಳ ವಿದ್ಯಾರ್ಥಿಗಳಿಗೆ ರಿಯಾ ಯಿತಿ ದರದ ಬಸ್ ಪಾಸ್ ಇನ್ನೂ ಸಿಕ್ಕಿಲ್ಲ.

ಇವೂ ಸೇರಿದಂತೆ ಹಲವು ಕಾರಣಗಳಿಂದಾಗಿ ವಿದ್ಯಾರ್ಥಿಗಳು ಕಾಲೇಜುಗಳ ಕಡೆ ಸುಳಿದಿಲ್ಲ. ಬಹುತೇಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳು ವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಪರಿಣಾಮ, ಕಾಲೇಜುಗಳ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು.

ಕೆಲವರು ಬಂದಿದ್ದರಾದರೂ ಅವರ ಬಳಿ ಕೋವಿಡ್ ಪರೀಕ್ಷಾ ವರದಿ ಇರಲಿಲ್ಲ. ಆದ್ದರಿಂದ ಅವರನ್ನು ಮಾರ್ಗಸೂಚಿಗಳ ಪ್ರಕಾರ ವಾಪಸ್ ಕಳು ಹಿಸಲಾಯಿತು.

ನಗರದ ಬಹುತೇಕ ಕಾಲೇಜುಗಳು ಬಿಕೋ
ನಗರದಲ್ಲಿ ನೂರಾರು ಕಾಲೇಜುಗಳಿವೆ. ಕೋವಿಡ್ ಭಯ ಮತ್ತು ಸರಿಯಾದ ಮಾಹಿತಿ ಕಾಲೇಜುಗಳು ನೀಡದ ಕಾರಣ ಜ್ಯೋತಿ ಕಾಲೇಜು, ಮರಾಠ ಮಂಡಾಳ ಕಾಲೇಜು, ಲಿಂಗರಾಜ ಕಾಲೇಜು ಸೇರಿದಂತೆ ಬಹುತೆಕ್ ಕಾಲೇಜಿಗಳು ವಿದ್ಯಾರ್ಥಿಗಳು ಇಲ್ಲದೇ ಬಿಕೋ ಎನ್ನುತ್ತಿದ್ದವು.