ಸಂಜಯ್ ಪಾಟೀಲ್ ಜೊತೆ ಸಭೆ ನಡೆಸಿದ ಜಿಲ್ಲಾ ಸಚಿವ ರಮೇಶ ಜಾರಕಿಹೊಳಿ

0

ಬೆಳಗಾವಿ :  ಸಂಜಯ್ ಪಾಟೀಲ್ ಜೊತೆ ಸಭೆ ನಡೆಸಿದ ಜಿಲ್ಲಾ ಸಚಿವ ರಮೇಶ ಜಾರಕಿಹೊಳಿ ಡಿ.5ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ..ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸಭೆ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

ಮಂಗಳವಾರ ಬೆಳಗಾವಿಯ ಗ್ರಾಮಾಂತರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಸೆಂಬರ್ 5ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತು ಸಚಿವ ರಮೇಶ ಜಾರಕಿಹೊಳಿ ಅವರು ಚರ್ಚೆ ನಡೆಸಿದರು. ರಾಜ್ಯ ಕಾರ್ಯ ಕಾರಿಣಿ ಸಭೆಯನ್ನು ಯಾವ ರೀತಿ ಆಯೋಜನೆ ಮಾಡಬೇಕು ಎಂಬ ಕುರಿತು ಪದಾಧಿಕಾರಿಗಳಿಂದ ಅಭಿಪ್ರಾಯವನ್ನು ಸಂಗ್ರಹಿಸಿದರು.

ಈ ವೇಳೆ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ್, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.